ಕಾಂಗ್ರೆಸ್ ಪಕ್ಷದ ಆತ್ಮವಲೋಕನ ಸಭೆ ಅಗತ್ಯ
ಕೋಲಾರ,ಜೂ,೮- ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ೮ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಶಾಸಕರು ಹಾಗೂ ಓರ್ವ ಸಚಿವರು, ಓರ್ವ ವಿಧಾನ ಪರಿಷತ್ ಸದಸ್ಯರು ಇದ್ದರೂ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಆಡಳಿತದಲ್ಲಿ ಇದ್ದರೂ ಸಹ ಕಾಂಗ್ರೇಸ್ ಅಭ್ಯರ್ಥಿ ಸೋತಿರುವ ಬಗ್ಗೆ ಜಿಲ್ಲಾ ಕಾಂಗ್ರೇಸ್ ಪಕ್ಷವು ಆತ್ಮವಲೋಕನ ಮಾಡಿ ಕೊಳ್ಳುವುದು ಅಗತ್ಯವಾಗಿದೆ.
ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದಿಂದ ನಿಯೋಜಿಸಿದಂತ ವೀಕ್ಷಕರ ನಿರ್ಲಕ್ಷತೆಯ ಜೂತೆಗೆ ಅಸಮಾರ್ಥತೆ ಕಾರಣದಿಂದಾಗಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸೋಲನ್ನಾಪ್ಪಿ ಕೋಲಾರ ಕಾಂಗ್ರೇಸ್ ಪಕ್ಷದ ಭದ್ರಕೋಟೆ ಎಂಬುದನ್ನು ಹುಸಿಗೊಳಿಸಿ ಮುಖಭಂಗಕ್ಕೆ ತುತ್ತಾಗಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಭಾರಿ ಘಟಬಂಧನ್ ತಂಡದ ಕಾಂಗ್ರೇಸ್ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗೆ ತಾವೇ ಕಾಲೆಳೆಯುವ ಮೂಲಕ ತಮ್ಮ ವೈಯುಕ್ತಿಕ ದ್ವೇಷವನ್ನು ಬಹಿರಂಗವಾಗಿ ಪ್ರದರ್ಶಿಸಿದರೂ ಸಹ ೫ ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಅದರೆ ಮೊನ್ನೆ ನಡೆದ ಚುನಾವಣೆಯಲ್ಲಿ ೫ ಶಾಸಕರುಕ,ಓರ್ವ ಎಂ.ಎಲ್.ಸಿ. ಪ್ರಚಾರ ಕೈಗೊಂಡರೂ ಸಹ ೮೦ ಸಾವಿರ ಮತಗಳ ಅಂತರದಲ್ಲಿ ಸೋಲನ್ನಾಪ್ಪಿರುವುದು ಕಾಂಗ್ರೇಸ್ ಪಕ್ಷಕ್ಕೆ ಮಸಿ ಬಳಿದಂತಾಗಿದೆ. ಕೆ.ಜಿ.ಎಫ್. ವಿಧಾನ ಸಭಾ ಕ್ಷೇತ್ರ ಹೊರತು ಪಡೆಸಿ ಉಳಿದ ಕಾಂಗ್ರೇಸ್ ವಿಧಾನ ಸಭಾ ಶಾಸಕರು ೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಎಲ್ಲರೂ ಹಿರಿಯ ಶಾಸಕರೇ ಹೊಸಬರು ಯಾರೂ ಇಲ್ಲ ಅದರೂ ಹಿನ್ನಡೆಯಾಗಿದ್ದು ಏಕೆ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಜಿಲ್ಲಾ ಕಾಂಗ್ರೇಸ್ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿ ಕೊಂಡು ಹೋಗುವಂತವರಿಗೆ ಅಧಿಕಾರವನ್ನು ನೀಡುವಲ್ಲಿ ರಾಜ್ಯ ಕಾಂಗ್ರೇಸ್ ಪಕ್ಷವು ವಿಫಲವಾಗಿದೆ. ಸಮರ್ಪಕವಾದ ಸಂಘಟನೆಯ ಸಾಮಾರ್ಥ್ಯ ಇಲ್ಲದವರ ಕೈಗೆ ಆಡಳಿತ ನೀಡಿ ವಿಫಲವಾಗಿದೆ. ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ಘಟಕಗಳಿಗೆ ನಾಮಕರಿಸಿರುವ ಸ್ವಯಂಘೋಷಿತ ಕೆಲವು ನಾಲಾಯಕ್ ಮುಖಂಡರು ಕಾರ್ಯಕರ್ತರನ್ನು ಸಮರ್ಪಕವಾಗಿ ಸಂಘಟನೆ ಮಾಡುವಲ್ಲಿ ಅಸಮಾರ್ಥರಾಗಿದ್ದಾರೆ.
ಜಿಲ್ಲಾ ಕಾಂಗ್ರೇಸ್ ಸಭೆಗಳಲ್ಲಿ ಸ್ವಯಂ ಘೋಷಿತ ನಾಯಕರನ್ನು ಪಡೆಸಿದರೆ ಬೆರಣಿಕೆ ಮಂದಿ ಕಾರ್ಯಕರ್ತರು ಇರುತ್ತಾರೆ, ಸಭೆಗಳನ್ನು ನಡೆಸುವಂತ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ಕನಿಷ್ಟ ೩೦೦ ಮಂದಿ ಅಸೀನರಾಗುವಂತ ಸೌಲಭ್ಯ ಇಲ್ಲದೆ ಓಭಿರಾಯನ ಕಾಲದ ಗುಬ್ಬಚ್ಚಿ ಗೊಡಿನ ಕಟ್ಟಡದಲ್ಲಿಯೇ ಮಾಡುವುದು ಕಂಡರೆ ಕೊಪದಲ್ಲಿರುವ ಮಂಡೋಕದ ಭಾವನೆಯ ಸಾಮ್ರಾಜ್ಯದಂತೆ ಗೋಚರಿಸುತ್ತದೆ.