ಕೆಕೆಆರ್‌ಡಿಬಿಯ ಅಕ್ಷರ, ಆರೋಗ್ಯ, ಕೌಶಲ್ಯ ಅವಿಷ್ಕಾರಗಳಿಗೆ ಪದವೀಧರರು, ಶಿಕ್ಷಕರು ಫಿದಾ: ಡಾ. ಅಜಯ್‌ ಸಿಂಗ್‌
ಕಲಬುರಗಿ:ಜೂ.07:ಈಶಾನ್ಯ ಪದವೀಧರ ಮತಕ್ಷೇತ್ರದಿಂದ ಮೇಲ್ಮನೆಗೆ ಪುನರಾಯ್ಕೆಗೊಂಡಿರುವ ಡಾ. ಚಂದ್ರಶೇಖಱ ಪಾಟೀಲರಿಗೆ ಅಭಿನಂದನೆ ಸಲ್ಲಿಸಿರುವ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್‌ ಅವರು , ಇಡೀ ಈಶಾನ್ಯದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಕೆಕೆಆರ್‌ಡಿಬಿ ಕೈಗೊಂಡಿರುವ ಸವಿರಾರು ಕೋಟಿ ರುಪಾಯಿಗಳ ಅಭಿವೃದ್ಧಿ ಕೆಲಸಗಳೇ ಇಂದು ಮೇಲ್ಮನೆಯ ಕಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ಕಾರಣಗಳಲ್ಲಿ ಪ್ರಮುಖವಾಗಿದೆ ಎಂದಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು, ಕೆಕೆಆರ್‌ಡಿಬಿಗೆ ಸಿಎಂ ಸಿದ್ದರಾಮಯ್ಯನವರು 3 ಸಾವಿರ ಕೋಟಿ ರು ಅನುದಾನ ನೀಡಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದರು. ಅದರ ಫಲವಾಗಿಯೇ ಕೆಕೆಆರ್‌ಡಿಬಿಯಿಂದ ತಾವು ಅಕ್ಷರ ಅವಿಷ್ಕಾರ ಹೆಸರಲ್ಲಿ ಶಳಾ ಶಿಕ್ಷಣದ ಪನರುತ್ಥಾನ ಯೋಜನೆ ರೂಪಿಸಿ ಜಾರಿಗೆ ತಂದಿದ್ದಾಗಿ ಹೇಳಿದ್ದಲ್ಲದೆ, ಈ ಯೋಜನೆ ಶಿಕ್ಷಕರು, ಪದವೀಧರರಿಗೆ ತುಂಬ ಮೆಚ್ಚುಗೆಯಾಗಿದೆ ಎಂಬುದು ಎಂಎಲ್‌ಸಿ ಇಲೆಕ್ಷನ್‌ ಫಲಿತಾಂಶವೇ ಕನ್ನಡಿ ಹಿಡಿದಿದೆ ಎಂದು ಹೇಳಿದ್ದಾರೆ.
ಕೆಕೆಆರ್‌ಜಡಿಬಿಯಿಂದ ಆರೋಗ್ಯ ಅವಿಷ್ಕಾರ, ಅಕ್ಷರ ಅವಿಷ್ಕಾರ, 25 ಸಾವಿರದಷ್ಟು ಯುವಕರಿಗಾಗಿ ಕೌಶಲ್ಯ ತರಬೇತಿ, ಪದವೀಧರರಿಗೆ ಅಕ್ಷರ ಮಿತ್ರ ಯೋಜನೆಯಲ್ಲಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿರೋದು ಸೇರಿದಂತೆ ಅನೇಕ ಪದವೀಧರರು, ಶಾಲಾ ಶಿಕ್ಷಣ ಪರವಾದಂತಹ ಕೆಕೆಆರ್‌ಡಿಬಿ ಯೋಜನೆಗಳು ಇಂದು ಪದವೀಧರರು, ಶಿಕ್ಷಕರ ಮನ ಸೂರೆಗೊಂಡಿವೆ ಎಂದು ಡಾ. ಅಜಯ್ ಸಿಂಗ್‌ ಹೇಳಿದ್ದಾರೆ.
ಈಚೆಗಿನ ಲೋಕಸಭೆ.ಲ್ಲಿಯೂ ಕಲಬುರಗಿ ಸೇರಿದಂತೆ ಕಲ್ಯಾಣ ಭಾಗದ ಎಲ್ಲಾ 5 ಸ್ಥಾನ ಕಾಂಗ್ರೆಸ್‌ ಗೆದ್ದಿದೆ. ಎಐಸಿಸಿ ಅಧ್ಯಕ್ಷರು ಡಾ. ಮಲ್ಲಿಕರ್ಜುನ ಖರ್ಗೆಯವರು ನಮ್ಮ ಭಾಗದವರಾಗಿದ್ದುದರಿಂದ ಪಕ್ಷಕ್ಕೆ, ಮುಖಂಡರಿಗೆ, ಕಾರ್ಯಕರ್ತರಿಗೆಲ್ಲರಿಗೂ ಆನೆಬಲ ಬಂದಿದೆ. ಹೀಗಾಗಿ ಎಲ್ಲಾ ಹಂತಗಳಲ್ಲಿಯೂ ಕಾಂಗ್ರೆಸ್‌ ಪಕ್ಷ ಕಲ್ಯಾಣದಲ್ಲಿ ಪ್ರಬಲವಾಗಿ ಹೊರಹೊಮ್ಮುತ್ತಿದೆ ಎಂದೂ ಡಾ. ಅಜಯ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಬಾರಿ ಡಾ. ಚಂದ್ರಶೇಖರ ಪಾಟೀಲರು 300 ಮತಗಳ ಆಚೀಚೆ ಗೆಲುವು ಸಾಧಿಸಿದ್ದರು. ಈ ಬಾರಿ 4 , 651 ಮತಗಳ ಗೆಲುವಿನ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ನಮ್ಮ ಪಕ್ಷದ ಮತ ಗಳಿಕೆ ಹೆಚ್ಚಿರೋದು ನಮ್ಮ ಜನಪಪ್ರೀಯತೆಗೆ ಕನ್ನಡಿ ಹಿಡಿದೆ. ಲೋಕಸಭೆಯಲ್ಲೂ ನಮ್ಮ ಮತ ಗಳಿಕೆ ಹೆಚ್ಚಿದೆ. ಅದೇ ತೆರನಾಗಿ ಮೇಲ್ಮನೆಯ ಪದವೀಧಝರ ಕ್ಷೇತ್ರದಲ್ಲಿಯೂ ಮತ ಗಳಿಕೆ ಹೆಚ್ಚಿರೋದು ಪಕ್ಷ ಕಲ್ಯಾಣ ಭಾಗದಲ್ಲಿ ಹಿದೆಂದಿಗಿಂತಲೂ ಹೆಚ್ಚು ಜನರ ಮನೆ- ಮನ ತಲುಪಿದೆ ಎಂದು ಡಾ. ಅಜಯ್‌ ಸಿಂಗ್‌ ಹರ್ಷ ವ್ಯಕ್ತಪಡಿಸಿದ್ದಾರೆ.