ಪ್ಯಾರಾ ಮೆಡಿಕಲ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ
ವಿಜಯಪುರ,ಜೂ.7: ವಿಜಯಪುರದ ಆರೋಗ್ಯ ಇಲಾಖೆ ಹಾಗೂ ಸರಕಾರಿ ನರ್ಸಿಂಗ್ ಮಹಾವಿದ್ಯಾಲಯ ಹಾಗೂ ಸರಕಾರಿ ನರ್ಸಿಂಗ್ ಶಾಲೆ ಇವರ ಸಹಯೋಗದಲ್ಲಿ ನಗರದ ಪ್ಯಾರಾಮೆಡಿಕಲ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಸಿದೇಶ್ವರ ಸ್ವಾಮಿಗಳ ವನದಲ್ಲಿರುವ 600 ಮತ್ತು ಬೃಂದಾವನದಲ್ಲಿರುವ 700 ಸಸಿಗಳಿಗೆ ನೀರುಣಿಸುವ ಮೂಲಕ ಪರಿಸರ ಪ್ರಜ್ಞೆ ಮೆರೆಯಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕÀ ಡಾ.| ಶಿವಾನಂದ ಮಾಸ್ತಿಹೊಳಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ಚಂದು ರಾಠೋಡ, ಡಾ. ಎ. ಜಿ. ಬಿರಾದಾರ, ನರ್ಸಿಂಗ ಗ್ರೇಡ 1ರ ಸುಜಾತಾ ಭಜಂತ್ರಿ, ನರ್ಸಿಂಗ್ ಸೂಪರವೈರ್À ವೀಣಾ ಕುಲಕರ್ಣಿ, ಭಾರತಿ ಸೂರಗಾವಿ, ನರ್ಸಿಂಗ್ ಮಹಾವಿದ್ಯಾಲಯದ ಪ್ರಾಂಶುಪಾಲೆ ಗೀತಾ ತರವಿ, ನರ್ಸಿಂಗ್ ಶಾಲೆಯ ಪ್ರಾಂಶುಪಾಲೆ ಭಾರತಿ ಮೊಕಾಶಿ ಹಾಗೂ ಭೋದಕರು ಮತ್ತು ವಿದ್ಯಾಥಿರ್üಗಳು ಉಪಸ್ತಿತರಿದ್ದರು.