ಜೂ.೯ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ ಆಸ್ಪತ್ರಗಳ ಸಹಯೋಗದೊಂದಿಗೆ ಜೂ.೯ರಂದು ಬೃಹತ್ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೮ರಿಂದ ಮಧ್ಯಾಹ್ನ ೩ಗಂಟೆವರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ
ಮಧುಮೇಹ ಬಿ.ಪಿ ಪರೀಕ್ಷೆ ಮತ್ತು ಸಲಹೆ (ಬೆಳಿಗ್ಗೆ ೧೧ಗಂಟೆಯವರೆಗೆ), ಕಂಪ್ಯೂಟರ್ ಮೂಲಕ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆ ಹೃದಯರೋಗ ತಪಾಸಣೆ, ಇ.ಸಿ.ಜಿ, ಮೂಳೆ ರೋಗ, ಕಿವಿ ಗಂಟಲು ಮೂಗು ಪರೀಕ್ಷೆ, ಚರ್ಮ ರೋಗ, ದಂತ ಪರೀಕ್ಷೆ ನಡೆಸಲಾಗುತ್ತದೆ ಎಂದು ಗೌರವ ಕಾರ್ಯದರ್ಶಿ ಭಾ.ಮಾ.ಗಿರೀಶ್ ತಿಳಿಸಿದ್ದಾರೆ.
ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಗರ್ಭಕೋಶದ ಪರೀಕ್ಷೆ ಶಸ್ತ್ರಚಿಕಿತ್ಸೆ (ಸ್ಕ್ಯಾನಿಂಗ್ ರಿಪೋರ್ಟ್ ಇದ್ದಲ್ಲಿ ತರತಕ್ಕದ್ದು). ಪೈಲ್ಸ್, ಹರ್ನಿಯಾ, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲು, ಈ ಶಸ್ತ್ರಚಿಕಿತ್ಸೆಗಳ ಸಲಹೆ ಸೇರಿದಂತೆ ಸ್ವಯಂಪ್ರೇರಿತ ರಕ್ತದಾನ ಶಿಬಿರ, ನೇತ್ರದಾನ ನೊಂದಣಿ ಇರುತ್ತದೆ.
ತಪಾಸಣೆಗೆಬರುವವರು ಹಿಂದಿನ ವೈದ್ಯಕೀಯ ತಪಾಸಣೆ ದಾಖಲೆಯೊಂದಿಗೆ ಆಧಾರ್,ಬಿಪಿಎಲ್, ಯಶಸ್ವಿನಿ,ಆಯುಷ್ ಮಾನ್ ಕಾರ್ಡ್ ಹೊಂದಿದ್ದಲ್ಲಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಪೋ: ೯೬೧೧೧೩೩೩೭೪, ೨೨೨೬೫೩೭೦, ೨೨೨೬೫೩೭೧ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.