ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಮುಖ್ಯ ಮಂತ್ರಿ ದಿ. ದೇವರಾಜ ಅರಸು 42ನೇ ಪುಣ್ಯತಿಥಿ ಆಚರಣೆ
ವಿಜಯಪುರ,ಜೂ.7:ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಮುಖ್ಯ ಮಂತ್ರಿ ದಿ. ದೇವರಾಜ ಅರಸ ಅವರ 42ನೇ ಪುಣ್ಯತಿಥಿ ಆಚರಿಸಲಾಯಿತು.
ಪುಣ್ಯತಿಥಿ ಅಂಗವಾಗಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮನಾಥ ಕಳ್ಳಿಮನಿ ಮಾತನಾಡಿ, ದೇವರಾಜ ಅರಸರ ಅವಧಿಯಲ್ಲಿ ಅಧಿಕಾರ ವಂಚಿತ ಸಮುದಾಯಗಳನ್ನು ಗುರುತಿಸಿ ಅಧಿಕಾರ ನೀಡುವ ಕೆಲಸವಾಯಿತು ಮತ್ತು ಅರಸು ಕಾರ್ಯಕ್ರಮಗಳ ಅನುಕೂಲ ಪಡೆದ ಯುವಕರು ಶಿಕ್ಷಣ ಅಧಿಕಾರ ಪಡೆದು ಮುಖ್ಯ ವಾಹಿನಿಯಲ್ಲಿ ಬೆಳೆಯುವಂತಾಯಿತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ದೇವರಾಜ ಅರಸ ಅವರು ಹಾವನೂರ ಆಯೋಗದ ವರದಿಯನ್ನು ಜಾರಿಗೊಳಿಸಿ ಕರ್ನಾಟಕದಲ್ಲಿ ಕ್ರಾಂತಿ ಮಾಡಿದರು ಮತ್ತು ಹಿಂದುಳಿದ ಅಲ್ಪ ಸಂಖ್ಯಾತರ, ದಲಿತರ ಬದುಕಿಗೆ ಬೆಳಕಾದರು ಎಂದು ಹೇಳಿದರು.
ಇನ್ನೋರ್ವ ಹಿರಿಯ ಕಾಂಗ್ರೆಸ್ ಮುಖಂಡ ಡಿ.ಎಲ್. ಚವ್ಹಾಣ ಮಾತನಾಡಿ, ‘ಉಳುವವನೇ ಒಡೆಯ’ ಸಂಪೂರ್ಣವಾಗಿ ಜಾರಿಗೆ ತಂದು ಬಡ ರೈತರಿಗೆ ನೆರವಾದರು. ಅರಸು ಒಬ್ಬ ಸರಳ, ವಿನಯ, ಬದ್ಧತೆಯ ಮುತ್ಸದ್ಧಿ ರಾಜಕಾರಣಿಯಾಗಿದ್ದರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷÀ ಸುಭಾಷ ಕಾಲೇಬಾಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಫಿರೋಜ್ ಶೇಖ, ಬಾಬಾಜಾನ ಬಾಗವಾನ ಹಾಗೂ ಮುಂತಾದವÀರು ಹಾಜರಿದ್ದರು.