ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ, ಸನ್ಮಾನ
ಕೊಲ್ಹಾರ:ಜೂ.7: ಆ ಗ್ರಾಮದಲ್ಲಿ ಬುಧವಾರ ಸಂಭ್ರಮದ ವಾತಾವರಣ, ಗ್ರಾಮದ ತುಂಬೆಲ್ಲ ರಂಗು ರಂಗಿನ ತೋರಣ, ವಾದ್ಯ ಮೇಳಗಳ ನಿನಾದ, ಸಂಭ್ರಮದ ಉತ್ಸವ, ಎಲ್ಲೆಡೆ ಜೈಕಾರ, ಮಾರ್ಧನಿಸಿದ ದೇಶ ಪ್ರೇಮ.
ಇಂತಹ ಅವಿಸ್ಮರಣೀಯ ಸನ್ನಿವೇಶಕ್ಕೆ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮ ಬುಧವಾರ ಸಾಕ್ಷಿಯಾಯಿತು, ಗ್ರಾಮದ ಶ್ರೀಶೈಲ ಸೊನ್ನದ ಎಂಬ ಯೋಧ ಕೇಂದ್ರೀಯ ಮೀಸಲು ಪಡೆಯಲ್ಲಿ ಸತತ 39 ವರ್ಷಗಳಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಂಗವಾಗಿ ಗ್ರಾಮಸ್ಥರು ನಿವೃತ್ತ ಯೋಧ ಶ್ರೀಶೈಲ ಸೊನ್ನದ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸ್ವಾಗತಿಸಿ ಸನ್ಮಾನಿಸಿದರು.