ಆರ್.ವಿ ಬಿಡಪ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ
ಬೀದರ:ಜೂ.7: ನಗರದ ಆರ್. ವಿ. ಬಿಡಪ ಕಾನೂನು ಮಹಾವಿಧ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ಸಂದರ್ಬದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮುನಿಯಪ್ಪ.ಟಿ ರವರು ಮಾತನಾಡಿ ಪರಿಶುದ್ದವಾದ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ, ಹಿಗಾಗಿ ಸಸಿ ನೇಡುವ ಕಾರ್ಯಕ್ರಮ ವೇದಿಕೆಗೆ ಸಿಮೀತವಾಗದೆ ಪ್ರತಿಯೋಬ್ಬರು ಅರಣ್ಯ ಸಂಪತ್ತು ಹೆಚ್ಚಳಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಆರ್ ವಿ ಬಿಡಪ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಜಯಶ್ರೀ ಪಾಟೀಲ ಮಾತನಾಡಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲರ ಕರ್ತವ್ಯ, ಪರಿಸರಕ್ಕೆ ಹಾನಿಯಾದರೆ ಇಡಿ ಮನುಕುಲ ನಾಶವಾಗುತ್ತದೆ ಎಂದರು, ಹಿರಿಯ ಪ್ರಾಧ್ಯಪಕರಾದ ಆರ್ ವಿ ಗೌಡ ಮಾತನಾಡಿ ಮನುಕುಲದ ಉದ್ದಾರಕ್ಕೆ ಹಸಿರು ಪರಿಸರ ನಿರ್ಮಾಣ ಬಹಳ ಅವಶ್ಯವಾಗಿದೆ ಎಂದರು. ಶ್ರೀಮತಿ ಸಂಗೀತ ಉಡಬಾಳ್ ಮಾತನಾಡಿ ಜನತೆಯಲ್ಲಿ ಪರಿಸರ ರಕ್ಷಣೆ ಹಾಗೂ ಅದರ ಅರಿವು ಮುಡಿಸುವ ಉದ್ದೇಶದಿಂದ ವಿಶ್ವದಾದ್ಯೆಂತ ಈ ದಿನವನ್ನು ವಿಶ್ವ ಪರಿಸರ ದಿನಾಚಾರಣೆ ಎಂದು ಆಚರಿಸಲಾಗುತ್ತದೆ. ಪರಿಸರವು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ ಪರಿಸರವಿಲ್ಲದೆ ಮಾನವನ ಜೀವನವು ಉಹಿಸಲು ಅಸಾಧ್ಯವಾಗಿದ್ದು ಪ್ರತಿಯೊಬ್ಬ ಮಾನವನು ಪರಿಸರ ಸಂರಕ್ಷಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದ ನಿರೋಪಣೆ ಎಲ್.ಎಲ್.ಬಿ ಪ್ರಥಮ ವರ್ಷದ ವಿಧ್ಯರ್ಥಿಯಾದ ಶ್ರೀ ವಿವೇಕ ಕೊರೆ ಅವರು ನಿರ್ವಹಿಸಿದರು ವಂದನಾರ್ಪಣೆಯನ್ನು ಶ್ರೀ ವಿವೇಕಾನಂದ ರವರು ಮಾಡಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಡಾ|| ಗಣಪತಿ ಟಿ ,ದೈಹಿಕ ನಿರ್ದೇಶಕರಾದ ಶ್ರೀ ಪ್ರಕಾಶ ಭೂರೆ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥೀತರಿದ್ದರು.