ಅರಣ್ಯ ಇಲಾಖೆಯಿಂದ ವಿವಿಧ ಜಾತಿಯ ಸಸಿಗಳು ವಿತರಿಸಲು ಲಭ್ಯ
ಕಲಬುರಗಿ,ಜೂ.07:ಪ್ರಸ್ತಕ 2024-25ನೇ ಸಾಲಿಗೆ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ಕಲಬುರಗಿ ವಿಭಾಗದ ವತಿಯಿಂದ ಮಳೆಗಾಲದಲ್ಲಿ ನೆಡಲು ವಿವಿಧ ಯೋಜನೆಗಳಡಿ ವಿವಿಧ ಜಾತಿಯ ಮತ್ತು ವಿವಿಧ ಅಳತೆಯ ಸಸಿಗಳನ್ನು ಪ್ರಾದೇಶಿಕ ಅರಣ್ಯ ವಲಯಗಳ ವಲಯ ಅರಣ್ಯ ಅಧಿಕಾರಿಗಳ ಕಚೇರಿಗಳಾದ ಆಳಂದ, ಚಿತ್ತಾಪೂರ, ಚಿಂಚೋಳಿ, ಚಿಂಚೋಳಿ (ವನ್ಯಜೀವಿ) ಮತ್ತು ಕಲಬುರಗಿ ವಲಯಗಳ ಸಂಬಂಧಪಟ್ಟ ಸಸ್ಯಕ್ಷೇತ್ರಗಳಲ್ಲಿ ಬೆಳೆಸಲಾಗಿದ್ದು, ಈ ಸಸಿಗಳು ವಿತರಿಸಲು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ ಪಾಟೀಲ ಅವರು ತಿಳಿಸಿದ್ದಾರೆ.