ಚಿಮ್ಮಕೋಡ್‍ದಲ್ಲಿ ಸಂಭ್ರಮದ ಅಖಂಡ ಹರಿನಾಮ ಸಪ್ತಾಹ ಸಂಪನ್ನ
ಬೀದರ್:ಜೂ.6:ತಾಲೂಕಿನ ಚಿಮ್ಮಕೋಡ್ ಗ್ರಾಮದ ಪಾಂಡುರಂಗ ಮಂದಿರದಲ್ಲಿ ಅಖಂಡ ಹರಿನಾಮ ಸಪ್ತಾಹ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸೋಹಳಾ 11ನೇ ವರ್ಷದ ಕಾರ್ಯಕ್ರಮ ಸಂಭ್ರಮದಿಂದ ಸಂಪನ್ನಗೊಂಡಿದೆ.
ಸತತ ಏಳು ದಿನಗಳ ಕಾಲ ನಿರಂತರವಾಗಿ ಭಜನೆ, ಕೀರ್ತನೆ ನಡೆದಿದ್ದು, ಗ್ರಾಮದ ಸುತ್ತಮುತ್ತಲಿನ ಅನೇಕ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ. ಪಂಡರಪೂರ್‍ದ ಅಂಬಾದಾಸ್ ಮಹಾರಾಜ ಕರಾಡೆ ಸೇರಿದಂತೆ ಹಲವರಿಂದ ಕೀರ್ತನೆ ಕಾರ್ಯಕ್ರಮ ನಡೆದಿದೆ. ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕಡೇ ದಿನ ಪಾಂಡುರಂಗ ದೇವಸ್ಥಾನದಿಂದ ನಂದಿ ಬಸವೇಶ್ವರ ದೇವಸ್ಥಾನದವರೆಗೆ ದಿಂಡಿ ಮೆರವಣಿಗೆ ನಡೆದಿದ್ದು, ಗ್ರಾಮದ ಪ್ರಮುಖರು, ಯುವಕರು, ಮಕ್ಕಳು ಭಜನೆ, ಕುಣಿತದ ಮೂಲಕ ಮೆರವಣಿಗೆಗೆ ಮೆರುಗು ತಂದರು. ಮಹಿಳೆಯರು ತುಂಬಿದ ಕಳಸ ಹೊತ್ತು ಸಾಗಿದರು.
ಪ್ರಮುಖರಾದ ಅಂಬಾದಾಸ್ ಮಹಾರಾಜ್ ಮಡಿವಾಳ್, ಮಾರುತಿ ಶಿವಬಾರೆ, ಸಂಜುಕುಮಾರ್ ಟೊಳ್ಳೆ, ಮಲ್ಲಿಕಾರ್ಜುನ ಕಂದಗೂಳೆ, ಪ್ರವೀಣ ಬೊಮ್ಮಗೊಂಡೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.