ಅಮೃತ ಸರೋವರ ದಡದಲ್ಲಿ ವಿಶ್ವ ಪರಿಸರ ದಿನ ಆಚರಣೆ
ಕಲಬುರಗಿ:ಜೂ.7:ಅಮೃತ ಸರೋವರ ಯೋಜನೆಯ ಉದ್ದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸುಂದರವಾದ ವನ ನಿರ್ಮಾಣವಾಗಬೇಕು. ವಿಶ್ರಾಂತಿ ಪಡೆಯುವ ಬೆಂಚ್‍ಗಳು, ವಾಕಿಂಗ್ ಟ್ರ್ಯಾಕ್, ಐಲ್ಯಾಂಡ್, ಸುತ್ತಲೂ ತಂತಿ ಬೇಲಿ ಹಾಕಿ ಆಕರ್ಷಣೀಯ ಕೇಂದ್ರಗಳಾಗಿ ಕಾಣುವಂತೆ ನಿರ್ಮಿಸಬೇಕೆಂದ ಸರೋವರ ಕೆರೆಗಳನ್ನು ಅನುಷ್ಠಾನಗೊಳಿಸಿ ಕೆರೆಯ ಸೌಂದರ್ಯ ಹೆಚ್ಚಿಸಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಗಿಡ ನೆಟಿ ಉದ್ಘಾಟಿಸಿ ಮಾತನಾಡಿದರು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ನಂದರಗಾ ಗ್ರಾಮ ಪಂಚಾಯತಿ ಅಮೃತ ಸರೋವರ ದಡದಲ್ಲಿ ಪರಿಸರವನ್ನು ಉಳಿಸಿ, ಬೆಳೆಸುವ ಉದ್ದೇಶ ಹಾಗೂ ಪ್ರಕೃತಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಯ ಮತ್ತು ಪ್ರಾಣಿ ಸಂಕುಲಗಳ ರಕ್ಷಣೆಗೊಸ್ಕರ್ ಗಿಡಗಳು ನಡೆಯುವುದು ತುಂಬಾ ಮುಖ್ಯ ಭೂಮಿಯು ಜಗತ್ತಿನ ಸಕಲ ಜೀವಿಗಳು ವಾಸಿಸುವ ವಿಶಾಲವಾದ ವಾತಾವರಣ
ಭೂದೇವಿಯನ್ನು ರಕ್ಷಿಸುವ ಕಾಯಕದಲ್ಲಿ ಇಂದಿನಿಂದಲೇ ತೊಡಗಬೇಕು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯನಾಶ ಮತ್ತು ಜೀವವೈವಿಧ್ಯದ ನಷ್ಟದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಕವಿತಾ ಧರ್ಮ ರಾಜ, ಸಹಾಯಕ ನಿರ್ದೇಶಕರು ರಮೇಶ ಪಾಟೀಲ, ಪಂಚಾಯತ ಅಭಿವೃದ್ಧಿ ಅಧಿಕಾರಿ ಈರಯ್ಯ ಹೀರೆಮಠ, ತಾಂತ್ರಿಕ ಸಂಯೋಜಕರು ಮಾಲಾಶ್ರೀ, ಐಇಸಿ ಸಂಯೋಜಕರು ಶೋಭಾ ಕಣಮಸ್ಕರ್ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಇದ್ದರು.