ಪರಿಸರ ಸಂರಕ್ಷಣೆ ಕಾರ್ಯ ನಿತ್ಯವೂ ಇರಲಿ:ರೇವಣಸಿದ್ದಯ್ಯ
ಕೆಂಭಾವಿ:ಜೂ.7: ಪ್ರತಿ ಶಾಲೆಯಲ್ಲೂ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ಜೊತೆಗೆ ಮಕ್ಕಳಿಗೆ ಮರಗಿಡಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಸ್ಪಂದನ ಪಬ್ಲಿಕ್ ಸ್ಕೂಲ್ ಮುಖ್ಯಗುರು ರೇವಣಸಿದ್ದಯ್ಯ ಮಠ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಪಂದನ ಪಬ್ಲಿಕ್ ಸ್ಕೂಲ್‍ನಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಲ್ಲಿ ಮರಗಿಡಗಳು ಅತ್ಯವಶ್ಯ. ಪರಿಸರ ದಿನಾಚರಣೆ ಕೇವಲ ಸಸಿಗಳನ್ನು ನೆಡುವ ಕಾರ್ಯಕ್ಕೆ ಸೀಮಿತವಾಗದೆ ವರ್ಷದ 365 ದಿನಗಳು ಮರಗಿಡಗಳನ್ನು ಬೆಳೆಸುವ ಮತ್ತು ಉಳಿಸುವ ಕಾರ್ಯದಲ್ಲಿ ತೊಡಗಿಸಕೊಳ್ಳಬೇಕು. ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರತಿ ತಿಂಗಳು ಸಸಿಗಳನ್ನು ನೆಡುವಂತೆ ಮನವಿ ಮಾಡಿದರು.
ನಂತರ ಮಕ್ಕಳಿಂದ ಪರಿಸರದ ಬಗ್ಗೆ ವಿವಿಧ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ನಡೆಯಿತು. ಶಿಕ್ಷಕಿಯರಾದ ರೊಹಿಣಿ ಗುಬ್ಯಾಡ, ಲತಾ ಕೊಣ್ಣುರ, ಮಾಸಾಬಿ, ಶ್ರೀದೇವಿ ಪಾಟೀಲ, ಶಾರದಾ ವಸ್ತ್ರದ, ಅಶ್ವಿನಿ ಸೇರಿದಂತೆ ಮಕ್ಕಳಿದ್ದರು.