ಮಳೆ ಗಾಳಿಗೆ ಬಿದ್ದ ಮರದಡಿ ಸಿಲುಕಿದ್ದ ವ್ಯಕ್ತಿಯರಕ್ಷಣೆ
ಕಲಬುರಗಿ, ಜೂ.7- ಮಳೆ ಗಾಳಿಗೆ ಬಿದ್ದ ಮರದಡಿ ಸಿಲುಕಿ ಜೀವನ್ಮರಣದ ಹೋರಾಟದಲ್ಲಿತೊಡಗಿದ್ದ ವ್ಯಕ್ತಿಯನ್ನು ಸ್ಥಳೀಯರೇ ರಕ್ಷಿಸಿದ ಘಟನೆ ಬುಧವಾರರಾತರ್ರಿ 7-30ರ ಸುಮಾರಿಗೆ ನಗರದ ಶರಣಬಸವೇಶ್ವರ್‍ಜಾತ್ರಾ ಮೈದಾನದಲ್ಲಿ ವರದಿಯಾಗಿದೆ.ಮರದಡಿ ಸಿಲುಕಿದ್ದ ಜೇವರ್ಗಿಯ ನಾಗಪ್ಪಎಂಬಾತನನ್ನೇರಕ್ಷಿಸಲಾಗಿದೆ.
ನಾಗಪ್ಪಅವರು ಕೆಲಸದ ನಿಮಿತ್ಯಜೇವರ್ಗಿಯಿಂದ ದ್ವಿಚಕ್ರವಾಹನದಲ್ಲಿ ಆಗಮಿಸಿದ್ದರು.ಶರಣಬಸವೇಶ್ವರ್‍ದೇವಸ್ಥಾನದ ಹತ್ತಿರ ಮಳೆ ಗಾಳಿ ಬರಲಾರಂಭಿಸಿದ್ದರಿಂದ ತಮ್ಮ ದ್ವಿಚಕ್ರವಾಹನವನ್ನುಅಲ್ಲಿಯೇ ನಿಲ್ಲಿಸಿ, ಜಾತ್ರಾ ಮೈದಾನದಲ್ಲಿನ ಮರದ ಕೆಳಗೆ ನಿಂತಿದ್ದರು.ಅದೇ ಸಂದರ್ಭದಲ್ಲಿ ಆ ಮರ ಬಿದ್ದ ಪರಿಣಾಮಅದರಡಿ ಸಿಲುಕಿ ನರಳುತ್ತಿದ್ದರು.
ವ್ಯಕ್ತಿಯ ನರಳಾಟವನ್ನು ಕೇಳಿದ ಪಕ್ಕದಲ್ಲಿಯೇಇದ್ದ ಪ್ರಕಾಶ್‍ಕಬ್ಬಿನ ಹಾಲಿನ ಅಂಗಡಿಯ ಮಾಲಿಕರು ಮತ್ತು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಪ್ರಕಾಶ್ ಬೆನಕನಳ್ಳಿ ಅವರು ನೋಡಿತಕ್ಷಣವೇತಮ್ಮಲ್ಲಿದ್ದ ಕೆಲಸಗಾರರೊಂದಿಗೆ ಸ್ಥಳಕ್ಕೆ ಧಾವಿಸಿ, ಮರದಡಿ ಸಿಲುಕಿದ್ದ ವ್ಯಕ್ತಿಯನ್ನು ಹೊರಗೆತರುವಲ್ಲಿ ಯಶಸ್ವಿಯಾದರು.
ಗಂಭೀರ ಗಾಯಗಳು ಆಗದಿದ್ದರೂ ಸಹ ಒಳಪೆಟ್ಟು ಆಗಿದ್ದರಿಂದತಕ್ಷಣ ನಾಗಪ್ಪಅವರನ್ನುಆಸ್ಪತ್ರೆಗೆಚಿಕಿತ್ಸೆಗಾಗಿ ಪ್ರಕಾಶ್ ಬೆನಕನಳ್ಳಿ ಅವರು ದಾಖಲಿಸಿದರು.ನಂತರ ನಾಗಪ್ಪಅವರ ಮನೆಯವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಪ್ರಕಾಶ್ ಬೆನಕನಳ್ಳಿ ಅವರು ಸಂಗತಿಯನ್ನು ತಿಳಿಸಿದರು.
ನಾಗಪ್ಪಆರೋಗ್ಯವಾಗಿದ್ದು, ಗಾಬರಿಪಡದಿರಲು ಪ್ರಕಾಶ್‍ಅವರುಕುಟುಂಬಸ್ಥರಿಗೆ ಹೇಳಿದರು.ಕುಟುಂಬಸ್ಥರು ಪ್ರಾಣಕ್ಕೆಯಾವುದೇರೀತಿಯಲ್ಲಿ ಹಾನಿಯಾಗಿಲ್ಲಎಂಬುದನ್ನು ತಿಳಿದು ನೆಮ್ಮದಿಯ ನಿಟ್ಟಿಸಿರು ಬಿಟ್ಟು, ಗುರುವಾರದಂದುಆಸ್ಪತ್ರೆಗೆ ಬರುವುದಾಗಿ ಹೇಳಿದರು.
ಸುಮಾರು 50ರಿಂದ 60 ವರ್ಷದ ಹಳೆಯದಾದ ಮರವು ಮಳೆ ಗಾಳಿಗೆ ಬಿದ್ದಿದ್ದರಿಂದಅನಾಹುತ ಸಂಭವಿಸಿದೆ ಎಂದು ಪ್ರಕಾಶ್ ಬೆನಕನಳ್ಳಿ ಅವರು ಹೇಳಿದರು.