ಮರಗಿಡ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು
ಸೈದಾಪುರ:ಜೂ.7:ಮನೆಗೊಂದು ಮರ, ಊರಿಗೊಂದು ವನ ಎಂಬ ನಾಣ್ನುಡಿಯಂತೆ ಪ್ರತಿಯೊಬ್ಬರೂ ಮರಗಿಡವನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಯೋಜನೆಯ ತಾಲೂಕ ಕೃಷಿ ಮೇಲ್ವಾಚರಕ ಶರಣಬಸಪ್ಪ ತಿಳಿಸಿದರು.
ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ನೀರೆರೆದು ಮಾತನಾಡಿದರು. ಆಧುನಿಕತೆಯ ನಾಗಾಲೋಟದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯ ಬೇಡಿಕೆ ಪೂರೈಸಲು ಪರಿಸರ ವಿನಾಶದ ಅಂಚಿಗೆ ತಲುಪಿದೆ. ಇದರಿಂದ ದಿನದಿನಕ್ಕೆ ಮಳೆಯ ಪ್ರಮಾಣ ಕ್ಷೀಣಿÂಸುತ್ತಿದೆ. ವಿದ್ಯಾರ್ಥಿಗಳು ಈಗಲಾದರೂ ಎಚ್ಚೆತ್ತುಕೊಂಡು ಮರಗಿಡಗಳನ್ನು ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಬಸವರಾಜ, ಮೇಲ್ವಿಚಾರಕಿ ರಂಗಮ್ಮ, ಶಿಕ್ಷಕಿ ಜಯಶ್ರೀ, ಸೇವಾ ಪ್ರತಿನಿಧಿ ರೇಣುಕಾ, ಪಾರ್ವತಿ, ಲಕ್ಷ್ಮೀ, ನಂದಕುಮಾರ, ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡದ ಸದಸ್ಯೆ ವೆಂಕಟರಾಮುಲು, ಬಸವರಾಜ, ಶಂಕರಚಾರ್ಯ ಸಾಬಣ್ಣ, ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.