ಕಾರ್ಕಳ ನ್ಯಾಯಲಯಕ್ಕೆ ಕನ್ಯಾಕುಮಾರಿ, ರಮೇಶ್ ಹಾಜರು
ಕಾರ್ಕಳ: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್ ಸದಸ್ಯರಾದ ಕನ್ಯಾಕುಮಾರಿ ಮತ್ತು ರಮೇಶ್ (ಶಿವ ಕುಮಾರ್) ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಸೆ. ೨೩ರಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಬೆಂಗಳೂರು ಪೊಲೀಸರು ಬಿಗು ಭದ್ರತೆಯೊಂದಿಗೆ ಮಂಗಳೂರಿಗೆ ಕರೆತಂದು ಸೋಮವಾರ ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
೨೦೧೧ರ ನ. ೧೯ರಂದು ಹೆಬ್ರಿ ತಾಲೂಕು ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಯಿತು.
ಕಾರ್ಕಳಕ್ಕೆ ತನಿಖೆಗಾಗಿ ಕರೆತಂದಿದ್ದ ವೇಳೆ ನ್ಯಾಯಾಲಯದ ಆವರಣದಲ್ಲಿ ರಮೇಶ್ ಹಲವು ಬಾರಿ ಘೋಷಣೆ ಕೂಗಿದ. ನಕ್ಸಲರು ದೇಶಭಕ್ತರು, ಮಾವೋವಾದಿ ಜಿಂದಾಬಾದ್, ಏ ಆಜಾದಿ ಜೂಟಿ ಹೇ, ದೇಶ್ ಕಿ ಜನತಾ ಬೂಕಿ ಹೇ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.