ಅರಣ್ಯ ಕಡಿಮೆಯಿಂದ ನೀರಿನ ಸೆಲೆ ಕಡಿಮೆ
ಇಂಡಿ:ಜೂ.7:ಜಾಗತೀಕರಣದ ನಂತರ ಭಾರತದ ಪರಿಸ್ಥಿತಿ ಬದಲಾಗಿದ್ದು, ಅಭಿವೃದ್ದಿ ಹೆಸರಿನಲ್ಲಿ ಮಣ್ಣು, ಪರಿಸರ ಹಾಳಾಗುತ್ತಿದೆ ಎಂದು ಬೆಂಗಳೂರಿನ ಡಿಸಿಪಿ ಸಿದ್ದರಾಜು ಹೇಳಿದರು.
ಅವರು ಬುಧವಾರ ಪಟ್ಟಣದಲ್ಲಿ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ಮೊದಲಿನ ಪರಿಸ್ಥಿತಿ ಈಗ ಇಲ್ಲ. ಅರಣ್ಯವು ಕಡಿಮೆ ಯಾಗುತ್ತಿದ್ದು, ನೀರಿನ ಸೆಲೆ ಕಡಿಮೆ ಯಾಗುತ್ತಿದೆ. ಸಾವಯುವ ಕೃಷಿ ಪದ್ದತಿ ಅಳವಡಿಸಿಕೊಂಡು ಗೋ ಗ್ರೀನ್, ಸೆವ್ ಗ್ರೀನ್, ಪ್ಲಾಸ್ಟಿಕ ಮುಕ್ತ ಭಾರತ ಮಾಡಿ ನಿಸರ್ಗ ನಿರ್ಮಿತವಾದ ಪರಿಸರ ರಕ್ಷಣೆ ಕೊನೆಯತನಕ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಸರದ ಜಾಗೃತಿ ಮೂಡಿಸಿ ಮಳೆ ನೀರನ್ನು ಹಿಡಿದು ಬಳಸಿಕೊಳ್ಳುವ ಕ್ರಮಗಳಿಗೆ ಆಧ್ಯತೆ ನೀಡಬೇಕಾಗಿದೆ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭೂಮಿ ಮತ್ತು ಪರಿಸಲು ಉಳಿಸಲು ಜನಾಲೋಂದನ ರೂಪದಲ್ಲಿ ಜಾಗೃತಿ ಮೂಡಿಸಬೇಕಾಗಿದೆ.ಆಧುನಿಕ ಕೃಷಿ ಪದ್ದತಿಯಿಂದ ನಿರಂತರವಾಗಿ ಅರಣ್ಯಗಳ ಒತ್ತುವರಿ ನಡೆಯುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ಪಟ್ಟಣಗಳು ವಿಸ್ತಾರಗೊಳ್ಳುತ್ತಿವೆ.ವಾಹನ ದಟ್ಟನೆ ಹೆಚ್ಚಾಗಿದೆ. ಅರಣ್ಯ ಉತ್ಖನ್‍ದ ಮಿತಿ ಮೀರಿದ ಬಳಕೆಯಿಂದ ಅರಣ್ಯಗಳು ನಾಶವಾಗುತ್ತಿವೆ. ನದಿ,ಕಣಿವೆ ವಿವಿಧೋದ್ದೇಶ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಾಗುವ ಅವಿಷ್ಕಾರ, ಸಂಶೋಧನೆಯು ಮಾಲಿನ್ಯ ಹೆಚ್ಚಾಗಲು ಕಾರಣವಾಗಿದೆ ಎಂದರು.
ತಹಸೀಲ್ದಾರ ಮಂಜುಳಾ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಸಿಪಿಐ ರತನಕುಮಾರ ಜಿರಗಿಹಾಳ, ಟಿಎ??? ಅರ್ಚನಾ ಕುಲಕರ್ಣಿ, ತಾಪಂ ಇಒ ನೀಲಗಂಗಾ ಬಬಲಾದ, ಪ್ರಗತಿಪರ ರೈತ ಎಸ್.ಟಿ.ಪಾಟೀಲ,ಎಲ್.ಜಿ.ನಾದ, ಡಿ.ಎ.ಮುಜಗೊಂಡ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.