ದಂಪತಿಗಳಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಬಂಜೆತನ: ಡಾ.ಸವಿತ ಮಹೇಶ್

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.7: ದಂಪತಿಗಳು 12 ತಿಂಗಳು ಗರ್ಭನಿರೋಧಕ ರಹಿತ ಲೈಂಗಿಕ ಸಂಪರ್ಕ ಹೊಂದಿದ್ದು ಮಕ್ಕಳಾಗದಿದ್ದಾಗ, (ಮಹಿಳೆಯು 35 ವರ್ಷದ ಒಳಗಿರಬೇಕು) ದಂಪತಿಗಳು 6 ತಿಂಗಳು ಗರ್ಭನಿರೋಧಕ ರಹಿತ ಲೈಂಗಿಕ ಸಂಪರ್ಕ ಹೊಂದಿದ್ದು ಮಕ್ಕಳಾಗದಿದ್ದಾಗ, (ಮಹಿಳೆಯು 35 ವರ್ಷದ ಮೇಲಿರಬೇಕು) (ಮಹಿಳೆಗೆ ವಯಸ್ಸಾದಂತೆ ಅಂಡಾಣುವಿನ ಗುಣಮಟ್ಟ ಇಳಿಯುತ್ತದೆ) ಮಹಿಳೆಯು ಗರ್ಭವನ್ನು ಅಂತಿಮ ಘಟ್ಟದವರೆಗೆ ಒಯ್ಯಲು ವಿಫಲಳಾದಾಗ ಅದನ್ನು ಬಂಜೆತನ ಎನ್ನುತ್ತಾರೆ ಎಂದು ಸಂತಾನ ಫೆರ್ಟಿಲಿಟಿ ಸೆಂಟರ್ ನ ಐ.ವಿ.ಎಫ್. ಸ್ಪೆಷಲಿಸ್ಟ್ ಡಾ.ಸವಿತ ಮಹೇಶ್ ಹೇಳಿದರು.ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನ ಕೇಂದ್ರದ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಗಾರದ ಅಡಿಯಲ್ಲಿ “ಬಂಜೆತನ-ಕಾರಣಗಳು, ಚಿಕಿತ್ಸೆ ಮತ್ತು ನಿವಾರಣೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.ಇತ್ತೀಚೆಗೆ ದಂಪತಿಗಳಲ್ಲಿ ಬಂಜೆತನ ಹೆಚ್ಚಾಗುತ್ತಿದ್ದು, ಅಂಡೋತ್ಪತ್ತಿಯಲ್ಲಿ ತೊಂದರೆ, ಡಿಂಬನಾಳದ ಪ್ರತಿಬಂಧಕತೆ, ಪುರುಷ ಸಂಬAಧೀ ಬಂಜೆತನ, ವಯಸ್ಸಿಗೆ ಸಂಬAಧಿಸಿದ ಅಂಶಗಳು, ಗರ್ಭಕೋಶದ ತೊಂದರೆ, ಹಿಂದಿನ ಸಂತಾನಹರಣ ಶಸ್ತ್ರ ಚಿಕಿತ್ಸೆ, ವಿವರಿಸಲಾಗದ ಬಂಜೆತನ ಇವುಗಳು ಬಂಜೆತನಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ತಿಳಿಸಿದರು.ಆಸ್ಪತ್ರೆಯಲ್ಲಿ ಬಂಜೆತನದಿAದ ಬಳಲುತ್ತಿರುವ ವ್ಯಕ್ತಿಗಳಿಗೆ ದೊರಕುವ ಸೌಲಭ್ಯಗಳೆಂದರೆ, ಪುರುಷನ ನಿಸ್ಸತ್ವದ ರೇತಸ್ಸನಲ್ಲಿ ಸತ್ವಯುತವಾದ ಚಟುವಟಿಕೆಯಿಂದ ಕೂಡಿರುವ ವೀರ್ಯಾಣುವನ್ನು ಹುಡುಕಿ ತೊಳೆದು ಅದನ್ನು ಹೆಂಡತಿಯ ಗರ್ಭದಲ್ಲಿ ಹಾಕುತ್ತಾರೆ. ಈ ವಿಧಾನದಲ್ಲಿ ವೀರ್ಯಾಣು ಮೊಟ್ಟೆಯನ್ನು ಕೂಡುವ ಸಂಭವ ಹೆಚ್ಚು. ಈ ವಿಧಾನವನ್ನು ಮತ್ತೆ ಮತ್ತೆ ಪುನರಾವರ್ತಿಸಬಹುದು ರೇತಸ್ಸಿನ ಗುಣಮಟ್ಟ ತೀರಾ ಕಳಪೆಯಾಗಿದ್ದಲ್ಲಿ ಐಸಿಎಸ್‌ಐ ಮಾಡುವುದು ಒಳ್ಳೆಯದು. ಈ ವಿಧಾನದಲ್ಲಿ ಶೇಕಡವಾರು ಯಶಸ್ಸು 15%-20% ಕಾಣಬಹುದು ಎಂದರು.ಒAದು ವೇಳೆ ಗಂಡನ ವೃಷಣವು ವೀರ್ಯಾಣುವನ್ನು ಹುಟ್ಟಿಸಲು ಅಸಮರ್ಥವಾದರೆ ದಂಪತಿಗಳು ದಾನಿಯಿಂದ ಗರ್ಭಧಾರಣೆಯನ್ನು ಆಯ್ಕೆಮಾಡಿಕೊಳ್ಳಬಹುದು. ಈ ವಿಧಾನದಲ್ಲಿ ಆರೋಗ್ಯವಂತ, ಬುದ್ಧಿವಂತ ಸ್ವಯಂಪ್ರೇರಿತರಾದ ದಾನಿಗಳನ್ನು ಗುರುತಿಸಿ, ಅವರು ಎಲ್ಲಾ ಖಾಯಿಲೆಗಳಿಂದ ವಿಮುಕ್ತರಾಗಿದ್ದಲ್ಲಿ ಅವರ ವೀರ್ಯಾಣುವನ್ನು ತೆಗೆದು ಶೈ