ಸಸಿ ನೆಡುವ ಕಾರ್ಯಕ್ರಮ
ಬೈಲಹೊಂಗಲ,ಜೂ.7: – ಮನುಷ್ಯ ತನ್ನ ಅನಿವಾರ್ಯತೆಗೂ ಮೀರಿ ಅರಣ್ಯ ನಾಶ ಮಾಡುತ್ತಿರುವುದರಿಂದ ಮುಂದೊಂದು ದಿನ ಆಕ್ಸಿಜೆನ್ ಖರೀದಿಸುವ ಪರಿಸ್ಥಿತಿ ಕೂಡ ನಿರ್ಮಾಣವಾಗಬಹುದು ಎಂದು ಚಿತ್ರನಟ ಶಿವರಂಜನ ಬೋಳನ್ನವರ ಕಳವಳ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಭಾರತೀಯ ಸೇವಾ ದಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಿಡ ಮರಗಳಲ್ಲಿ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಆದರೆ ಪ್ರಸ್ತುತ ಮನುಷ್ಯ ತನ್ನ ಅನಿವಾರ್ಯತೆಗೂ ಮೀರಿ ಅರಣ್ಯವನ್ನು ನಾಶ ಮಾಡುತ್ತಿರುವುದು ಶೋಚನೀಯ ಸಂಗತಿ.
ಹೀಗೆ ಮರಗಳನ್ನು ಕಡಿಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಆಕ್ಸಿಜೆನ್ ಕೊರತೆ ಉಂಟಾಗಬಹುದು.
ನಮ್ಮ ಜೀವನದಲ್ಲಿ ಆಕ್ಸಿಜನ ನ ಮಹತ್ವತೆ, ಹಾಗೂ ಆಕ್ಸಿಜನ್ ಕೊರತೆಯ ದುಷ್ಪರಿಣಾಮವನ್ನು
ಕೋವಿಡ್ ಸಂದರ್ಭದಲ್ಲಿ ಕಂಡಿದ್ದೇವೆ.
ಅರಣ್ಯ ನಾಶ ನಿಲ್ಲದಿದ್ದರೆ ಮುಂದೊಂದು ದಿನ ನೀರಿನಂತೆ ಆಕ್ಸಿಜನ ಕೂಡ ಖರೀದಿಸುವ ಪರಿಸ್ಥಿತಿ ಒದಗಿ ಬಂದರೂ ಅಚ್ಚರಿಯಿಲ್ಲ. ಮುಂದಿನ ಪೀಳಿಗೆಗೂ ಸಮರ್ಪಕ ಆಕ್ಸಿಜನ್ ಒದಗಿಸಬೇಕಿದ್ದಲ್ಲಿ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸೋಣ ಎಂದು ಕರೆ ನೀಡಿದರು.
ಸಂಘಟನೆ ಜಿಲ್ಲಾಧ್ಯಕ್ಷ, ಮಹಾಂತೇಶ ತುರಮರಿ, ಜಿಲ್ಲಾ ಸಂಘಟಕ ಅನಿಲ ಪತ್ತಾರ, ಜಿಲ್ಲಾ ಸಮಿತಿ ಸದಸ್ಯ, ಎಂ. ಎಂ. ಕೋಲಕಾರ, ತಾಲೂಕು ಕೋಶಾಧ್ಯಕ್ಷ, ಸುಭಾಷ್ ತುರಮರಿ, ರಘು ಶೀಗಿಹಳ್ಳಿ, ಮಾಳೇಶ ಸವಟಗಿ ಇದ್ದರು.