ಪರಿಸರ ರಕ್ಷಣೆ ಪ್ರತಿಯೊಬ್ಬರು ಗಿಡ ನೆಡಬೇಕು
ಚನ್ನಮ್ಮನ ಕಿತ್ತೂರು,ಜೂ.7: ಪ್ರಕೃತಿಮಾತೆ ನಮ್ಮೆಲ್ಲರನ್ನೂ ರಕ್ಷಿಸುತ್ತಾಳೆ ನಾವೇಕೆ ಅವಳನ್ನು ರಕ್ಷಿಸಬಾರದು ನಮ್ಮ ರಕ್ಷಣೆಯಾಗಬೇಕಾದರೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಒಂದೊಂದು ಗಿಡ ನೆಡುವ ಕೆಲಸವಾದಾಗ ಪರಿಸರವನ್ನು ರಕ್ಷಿಸಿದಂತೆ ಆಗುತ್ತದೆಂದು ಪ್ರಾ.ಡಾ.ಜಿಕೆ ಭೂಮನಗೌಡರ ಹೇಳಿದರು.
ಕಿತ್ತೂರಿನ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಒಕ್ಕೂಟ, ರೋವರ್ಸ್ ಮತ್ತು ರೇಂಜರ್ಸ್, ಯುಥ್ ರೆಡ್ ಕ್ರಾಸ್, ಎನ್.ಸಿ.ಸಿ ಘಟಕಗಳ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು. ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಆದರೆ ಮಾನವ ಮಾತ್ರ ಪ್ರಕೃತಿಯ ವಿಚಾರದಲ್ಲಿ ನಿರ್ದಯವಾಗಿದ್ದಾನೆ. ಮಾನವರು ನೈಸರ್ಗಿಕ ಸಂಪನ್ಮೂಲವನ್ನು ದಿನೇ ದಿನೇ ಹಾಳುಗೆಡುವುತ್ತಿದ್ದಾರೆ. ಕಾಡುಗಳನ್ನು ಕಡಿದು ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಹೆಚ್ಚಲು ಕಾರಣರಾಗಿದ್ದಾರೆಂದರು.
ಪ್ರಾಸ್ತಾವಿಕವಾಗಿ ಉಪನ್ಯಾಸಕ ಡಾ. ಕೆ. ಆರ್. ಮೆಳವಂಕಿ, ಮಾತನಾಡಿದರು.
ವಿದ್ಯಾರ್ಥಿಗಳು ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು, ಎನ್.ಸಿ.ಸಿ ಅಧಿಕಾರಿ ಎಮ್. ಜಿ. ಹಿರೇಮಠ, ರೆಂಜರ್ಸ್ ಲೀಡರ್ ಪಿ. ಎಲ್. ಧಾಮೊಣೆ, ಸತೀಶ ಶಹಾಪೂರಮಠ, ಪಿ. ಬಿ. ಹೊನ್ನಪ್ಪನವರ, ನೇತ್ರಾ ಚೌಕಿನಿಶಿ, ಕವಿತಾ ಕುಂಬಾರ, ಹೊನ್ನರಾಜು ಇತರರು ಕಾಯಕ್ರಮದಲ್ಲಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎಚ್. ಕೆ. ನಾಗರಾಜ ಸ್ವಾಗತಿಸಿದರು, ಡಾ. ಬಿ. ಜಿ. ನಂದನ ವಂದಿಸಿದರು, ಡಾ. ಸಂಗೀತಾ ತೋಲಗಿ ಕಾರ್ಯಕ್ರಮ ನಿರೂಪಿಸಿದರು.