ಶಾಮನೂರು ಶಾಲೆಯಲ್ಲಿ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೭; ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಮನೂರು ಬಡಾವಣೆಗೆ  ಕರ್ನಾಟಕ ಅರಣ್ಯ ಇಲಾಖೆ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ಇವರು ಗಿಡಗಳನ್ನು ನೀಡಿದರು.ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು,ಈ ಸುಂದರ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆ  ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೇಶವ ಸರ್ ,ಎ.ಜೆ ರವಿಕುಮಾರ್  , ಮಾಜಿ ಸೈನಿಕರಾದ  ಬೀರಪ್ಪ  ,ಶಾಲಾ ಮುಖ್ಯ ಗುರುಗಳಾದ  ನಾಗರತ್ನ, ಸಹ ಶಿಕ್ಷಕರಾದ ಸುಮರಾಣಿ , ಮಮತಾ,  ರಾಜ್‌ಕುಮಾರ್,  ರಾಜೇಶ್ವರಿ ಎಂ, ಹಾಗೂ ದೇವಿಕಾ , ಶಾಲಾ ಸಿಬ್ಬಂದಿ ವರ್ಗದವರು, ಮುದ್ದು ಮಕ್ಕಳು  ಉಪಸ್ಥಿತರಿದ್ದರು,