ಜೆಎಸ್‍ಎಸ್‍ನಲ್ಲಿ ವಿಶ್ವ ಶುಶ್ರೂಷಕರÀ ದಿನಾಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.07:- ಜೆಎಸ್‍ಎಸ್ ಆಸ್ಪತ್ರೆ, ಜೆಎಸ್‍ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಜೆಎಸ್‍ಎಸ್ ಸ್ಕೂಲ್ ಆಫ್ ನರ್ಸಿಂಗ್ ಸಂಯುಕ್ತಾಶ್ರಯದಲ್ಲಿ ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆ ಆಚರಿಸಲಾಯಿತು.
ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ಆಸ್ಪತ್ರೆಯ ಶುಶ್ರೂಷಕರ ಮಾನವೀಯತೆಯ ಸೇವೆ ಶ್ಲಾಘಿಸಿ, ಶುಶ್ರೂಷಕರು ಆಸ್ಪತ್ರೆಯ ಬೆನ್ನೆಲುಬು. ಆಸ್ಪತ್ರೆಯಲ್ಲಿ ಶೇ.59ರಷ್ಟು ಜನ ಶುಶ್ರೂಷಕ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕೆ.ಎಸ್.ಸುಮಾ ಮಾತನಾಡಿ, ಎಲ್ಲಾ ಹುದ್ದೆಗಳಿಗಿಂತ ಶುಶ್ರೂಷ ಹುದ್ದೆ ಪ್ರಮುಖವಾದುದು. ವೈದ್ಯರ ನಂತರ ರೋಗಿಗಳ ಆರೈಕೆಯಲ್ಲಿ ಬಹಳ ಪ್ರಮುಖ ಮತ್ತು ಜವಾಬ್ದಾರಿಯುತ ಪಾತ್ರ ವಹಿಸುವವರು ಶುಶ್ರೂಷಕರು ಎಂದು ತಿಳಿಸಿದರು.
ಜೆಎಸ್‍ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು ಮಾತನಾಡಿ, ನರ್ಸಿಂಗ್ ಹುದ್ದೆ ಬಹಳ ಜವಬ್ದಾರಿಯುತವಾಗಿದ್ದು. ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ನೀಡಿ ಆರೈಕೆ ಮಾಡಬೇಕು. ಶುಶ್ರೂಷಕರು ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಇರುತ್ತಾರೆ. ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದೆ ರೋಗಿಗಳ ಆರೈಕೆಯಲ್ಲಿರುತ್ತಾರೆ ಎಂದು ಸೇವೆಯನ್ನು ಸ್ಮರಿಸಿ ಅಭಿನಂದನೆ ತಿಳಿಸಿದರು.
ಡಾ.ಸಿ.ಎನ್.ಮೃತ್ಯುಂಜಯಪ್ಪ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಸುಧಾ ಮೃತ್ಯುಂಜಯಪ್ಪ ಮಾತನಾಡಿ, ಪ್ರತಿ ವರ್ಷ ಮೇ 12 ರಂದು, ಆಧುನಿಕ ಶುಶ್ರೂμÉಯ ಪ್ರವರ್ತಕ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಗೌರವಿಸಲು ವಿಶ್ವ ಶುಶ್ರೂಷಕರ ದಿನಾಚರಣೆ ಆಚರಿಸಲಾಗುತ್ತದೆ. ಪ್ರತಿಯೊಬ್ಬರು ಒಂದೊಂದು ಗಿಡ ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಿ ಎಂದು ತಿಳಿಸಿದರು.
ಇದೇ ವೇಳೇ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 6 ಜನ ಶುಶ್ರೂಷಕರಿಗೆ ಡಾ.ಸಿ.ಎನ್.ಮೃತ್ಯುಂಜಯಪ್ಪ ಟ್ರಸ್ಟ್ ವತಿಯಿಂದ ಅಭಿನಂದನಾ ಪತ್ರ ಮತ್ತು ನಗದು ಬಹುಮಾನ ಹಾಗೂ ಜೆಎಸ್‍ಎಸ್ ಆಸ್ಪತ್ರೆವತಿಯಿಂದ ಪ್ರಶಂಸನಾ ಪತ್ರ ಮತ್ತು ಬೆಳ್ಳಿ ನಾಣ್ಯಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶುಶ್ರೂಷ ಸೇವೆಗಳ ವಿಭಾಗದ ಮುಖ್ಯಸ್ಥೆ ಜಾನೆಟ್ ಮಥಿಯಾಸ್, ಜೆಎಸ್‍ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಅಶ್ವಥಿದೇವಿ, ಜೆಎಸ್‍ಎಸ್ ಶುಶ್ರೂಷ ಶಾಲೆಯ ಪ್ರಾಂಶುಪಾಲೆ ರೇಣುಕಾದೇವಿ, ಜೆಎಸ್‍ಎಸ್ ಆಸ್ಪತ್ರೆ ಮತ್ತು ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.