ಚಾಮರಾಜನಗರಕ್ಕೂ ಮೈಸೂರು ಸಂಸ್ಥಾನಕ್ಕೂ ನಿಕಟ ಸಂಬಂಧವಿದೆ: ಸುರೇಶ್‍ಋಗ್ವೇದಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.07- ಮೈಸೂರು ಸಂಸ್ಥಾನಕ್ಕೂ ಚಾಮರಾಜನಗರಕ್ಕೂ ನಿಕಟ ಸಂಬಂಧ ವಿದ್ದು ಚಾಮರಾಜನಗರದಲ್ಲಿ ಚಾಮರಾಜೇಶ್ವರ ದೇವಾಲಯದ ನಿರ್ಮಾಣ ಹಾಗೂ ನಗರ ಸ್ಥಾಪನೆಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಷ್ಟ್ರಯುವ ಪ್ರಶಸ್ತಿ ಪುರಸ್ಕøತರಾದ ಸುರೇಶ್‍ಎನ್‍ಋಗ್ವೇದಿ ಬಣ್ಣಿಸಿದರು.
ಅವರು ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ರಾಜಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಜನ್ಮದಿನವನ್ನು ಆಚರಣೆ ಸಂದರ್ಭದಲ್ಲಿ ಮಾತನಾಡಿ ಚಾಮರಾಜನಗರಕ್ಕೆ ಮೈಸೂರು ಸಂಸ್ಥಾನಕ್ಕೂ ನಿಕಟ ಸಂಬಂಧ ವಿದ್ದು ಚಾಮರಾಜನಗರದಲ್ಲಿ ಚಾಮರಾಜೇಶ್ವರ ದೇವಾಲಯದ ನಿರ್ಮಾಣ ಹಾಗೂ ನಗರ ಸ್ಥಾಪನೆಗೆ ಅವರ ಕೊಡುಗೆ ಅಪಾರವಾಗಿದೆ. ನಗರದ ರೈತರಿಗೆ ಅಪಾರ ಪ್ರಮಾಣದ ಭೂಮಿಯನ್ನು ನೀಡಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಅವರ ಬದುಕಿಗೆ ಶಾಶ್ವತವಾದ ಶಕ್ತಿಯನ್ನು ನೀಡಿದವರು. ಚಾಮರಾಜನಗರದ ಜನತೆ ಸದಾಕಾಲ ಮೈಸೂರು ಸಂಸ್ಥಾನದ ಕೃಪೆಗೆ ಪಾತ್ರವಾಗಿತ್ತು. ಆμÁಢ ಮಾಸದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವದ ಸಂದರ್ಭದಲ್ಲಿ ಮಹಾರಾಜರಿಗೆ ಗೌರವ ಸಲ್ಲಿಸುವ ಸಂಪ್ರದಾಯ ಇಂದಿಗೂ ಕೂಡ ರೂಢಿಯಲ್ಲಿದೆ ಎಂದು ತಿಳಿಸಿದರು.
ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಆಡಳಿತದ ಮಾರ್ಗ ದರ್ಶನದ ಅಧ್ಯಯನದ ಮೂಲಕ ಆಡಳಿತಗಾರರು ಕಾರ್ಯ ನಿರ್ವಹಿಸಿದರೆ ಪ್ರತಿ ನಗರವು ಮೈಸೂರು ನಗರದಂತೆ ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜ್ಞಾನಚಿಂತನೆ, ದೂರದೃಷ್ಟಿ, ಕರ್ತೃತ್ವದೃಷ್ಟಿ ಇಂದಿನ ಆಡಳಿತಗಾರರಿಗೆ ಬಹಳ ಮಾರ್ಗದರ್ಶನವಾಗಿದೆ. ಇವರ ಆಡಳಿತದ ಅವಧಿಯಲ್ಲಿ ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ನೀರಾವರಿ, ಮಹಿಳಾ ಶಿಕ್ಷಣ, ಕಾಲೇಜುಗಳ ಸ್ಥಾಪನೆ, ವಸತಿ ನಿಲಯಗಳ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆ, ಅಣೆಕಟ್ಟುಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ, ಕಲೆ, ಸಾಹಿತ್ಯ, ಸಂಸ್ಕೃತಿ ನಾಟ್ಯ, ಸಂಗೀತ, ಕರಕುಶಲತೆ ಜನಪದ ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲೂ ಅಮೂಲ್ಯ ಕೊಡುಗೆ ನೀಡಿದ್ದಾರೆ . ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ, ಧಾರ್ಮಿಕ ಸಮಾನತೆಯನ್ನು ತರಲು ಸರ್ವರಿಗೂ ಮೀಸಲಾತಿಯನ್ನು ನೀಡಿ ರಾಷ್ಟ್ರದ ಅಭ್ಯುದಯಕ್ಕೆ, ಭಾರತದ ಅಭಿವೃದ್ಧಿಗೆ ಸಹಕಾರಿಯಾದ ಮೊದಲಿಗರು, ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದೆಂದಿಗೂ ಅಮರರು ಎಂದು ಒಡೆಯರ್ ರವರ ಕೊಡುಗೆಗಳನ್ನು ಸ್ಮರಿಸಿದರು.
ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಕೊಂಗರ ಹಳ್ಳಿ ನಾಗರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡುತ್ತ ಚಾಮರಾಜನಗರ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪನೆ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಕನ್ನಡ ನಾಡು ನುಡಿ ಸಂಸ್ಕೃತಿ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಅವರ ಪೆÇ್ರೀತ್ಸಾಹ ಸರ್ವರಿಗೂ ಮಾದರಿಯಾಗಿದೆ. ಅಣೆಕಟ್ಟನ್ನು ನಿರ್ಮಾಣ ಮಾಡಿ ನೀರಾವರಿಯ ಮೂಲಕ ಲಕ್ಷಾಂತರರೈತರಿಗೆ ಅನುಕೂಲ ಮಾಡಿಕೊಟ್ಟ ಶ್ರೇಷ್ಠ ವ್ಯಕ್ತಿ. ಮೈಸೂರು ಪ್ರಾಂತ್ಯದಆರ್ಥಿಕಅಭಿವೃದ್ಧಿಗೆ ಮೈಸೂರು ಸಂಸ್ಥಾನದ ಕೊಡುಗೆಅಪಾರಎಂದುಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿರವಿಚಂದ್ರಪ್ರಸಾದ್, ಬಿಕೆ ಆರಾಧ್ಯ, ನಾಗರಾಜುಕೆಂಪನಪುರ,ಸರಸ್ವತಿ, ಲಕ್ಷ್ಮೀ ನರಸಿಂಹ,ಶಿವಲಿಂಗ ಮೂರ್ತಿ, ರವಿಚಂದ್ರ, ಜಯಪ್ರಕಾಶ್, ಮೋಹನ್‍ಗೌಡ,ಬಂಡಿಗೆರೆ ಸಿದ್ದೇಶ್, ಸುಮುಖ್ ಮುಂತಾದವರುಇದ್ದರು.