ವಿದ್ಯಾರ್ಥಿಗಳು ಮತ್ತು ಯುವಕರು ತಂಬಾಕು ಬಳಕೆಯಿಂದ ದೂರವಿರಿ: ಪ್ರಾಂಶುಪಾಲ ಶಿವನಂಜಪ್ಪ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.07- ಮಾನಸಿಕ ಹಾಗೂ ದೈಹಿಕಆರೋಗ್ಯದ ಮೇಲೆ ತಂಬಾಕುತುಂಬಾ ಪರಿಣಾಮ ಬೀರುವುದರಿಂದ ವಿದ್ಯಾರ್ಥಿಗಳು ಮತ್ತುಯುವಕರುತಂಬಾಕು ಬಳಕೆಯಿಂದ ದೂರವಿರಬೇಕೆಂದು ಪ್ರಾಂಶುಪಾಲ ಶಿವನಂಜಪ್ಪನವರು ತಿಳಿಸಿದರು.
ಅವರುಅಮಚವಾಡಿ ಸರ್ಕಾರಿ ಪದವಿಪೂರ್ವಕಾಲೇಜು ಸಭಾಂಗಣದಲ್ಲಿ ನಡೆದತಂಬಾಕುರಹಿತ ದಿನ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಂಬಾಕು ಸೇವನೆಯ ಹವ್ಯಾಸಕ್ಕೆ ಬಲಿಯಾಗುವುದು ಸಾಮಾನ್ಯವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಇದಕ್ಕೆ ವ್ಯಸನರಾಗಿದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಕಳೆದುಕೊಂಡು ತಮ್ಮಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಸೇವನೆಯಿಂದ ಲಕ್ಷಾಂತರಜನರು ಮರಣ ಹೊಂದಿದ್ದಾರೆ. ದೇಹದ ಅಂಗಾಂಗಗಳ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತಿದೆ. ಪ್ರತಿಯೊಬ್ಬರುತಂಬಾಕು ಬಳಸುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕೆಂದರು.
ಉಪನ್ಯಾಸಕ ಸುರೇಶ್‍ಋಗ್ವೇದಿ ಮಾತನಾಡಿ, ವ್ಯಾಸಂಗದ ದಿನಗಳಲ್ಲಿ ಉತ್ತಮ ಗೆಳೆತನವನ್ನು, ಸ್ನೇಹಿತರನ್ನು ಮಾಡಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾದಾಗ ಇಡೀಜೀವನವೇ ವ್ಯರ್ಥವಾಗುತ್ತದೆ. ದುಶ್ಚಟಗಳಿಗೆ ಬಲಿಯಾದಾಗ ಶಿಕ್ಷಣ ಆಸಕ್ತಿ ಕುಂಠಿತಗೊಂಡು ಫಲಿತಾಂಶವಿಲ್ಲದೆಜೀವನದಲ್ಲಿ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯ ಹೀನತೆ ಉಂಟಾಗಿ ನಾಶವಾಗುವ ಜೊತೆಗೆಕುಟುಂಬದ ಹಾಗೂ ಊರಿನಗೌರವ ನಾಶವಾಗುತ್ತದೆ.
ಯುವಕರುಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಹವಾಸ ದೋಷದಿಂದ ಹಾಳಾಗದೆ ಉತ್ತಮಜೀವನವನ್ನು ನಡೆಸಬೇಕು. ಮಾನವಜನ್ಮ ಪವಿತ್ರವಾಗಿರುವುದು ಮಾನವಜನ್ಮದಲ್ಲಿ ಶ್ರೇಷ್ಠವಾಗಿ ಬದುಕಲುಉತ್ತಮ ಮಾರ್ಗಗಳನ್ನು ಅನುಸರಿಸಿ ಎಂದು ತಿಳಿಸಿ ತಂಬಾಕುರಹಿತ ದಿನದ ಪ್ರತಿಜ್ಞೆಯನ್ನು ಪ್ರತಿಯೊಬ್ಬರು ಸ್ವೀಕರಿಸಿ ಜೀವನಬಿಡಿತಂಬಾಕನ್ನು ಬಳಸುವುದಿಲ್ಲ ಹಾಗೂ ಕುಟುಂಬದವರು ಬಳಸದಂತೆ ಪ್ರಯತ್ನಿಸುವಕಾರ್ಯವನ್ನು ಮಾಡುತ್ತೇವೆಎಂದು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಹಿರಿಯಉಪನ್ಯಾಸಕಆರ್ ಮೂರ್ತಿ ಮಾತನಾಡಿ, ಶಾಲಾ-ಕಾಲೇಜುಗಳ ಸುತ್ತಮುತ್ತ ಯಾವುದೇ ತಂಬಾಕು ಮಾರಾಟವನ್ನು ನಿμÉೀಧಿಸಲಾಗಿದೆ. ವಿದ್ಯಾರ್ಥಿಗಳು ತಂಬಾಕು ಬಳಕೆಯಿಂದ ಆಗುವ ಅನಾಹುತಗಳನ್ನು ತಿಳಿದುಕೊಳ್ಳಬೇಕು.ಉತ್ತಮಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಂಬಾಕುರಹಿತ ದಿನದ ಮಹತ್ವವನ್ನು ತಿಳಿಸಿದರು.
ಉಪನ್ಯಾಸಕರಾದ ಶಿವಸ್ವಾಮಿ, ಬಸವಣ್ಣ ಉಪಸ್ಥಿತರಿದ್ದರು. ತಂಬಾಕುರ ಹಿತ ದಿನದ ಅಂಗವಾಗಿ ವಿದ್ಯಾರ್ಥಿಗಳು ಜಾಥಾ ನಡೆಸಿ ಗಮನ ಸೆಳೆದರು.