ಕೆಎಸ್‌ಎಸ್‌ಡಿ ಜಿಲ್ಲಾಧ್ಯಕ್ಷರಾಗಿ ಹಾರೋಹಳ್ಳಿ ಆರ್.ವೇಣು
ಕೋಲಾರ,ಜೂ.೭- ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಸಭೆ ನಡೆಸಿ ಕೋಲಾರ ಜಿಲ್ಲೆಯ ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಪದಾಧಿಕಾರಿಗಳನ್ನು ಸರ್ವಾನುಮತದಿದ ಆಯ್ಕೆಯಾದರು.
ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಕರ್ನಾಟಕ ಸಮತಾ ಸೈನಿಕ ದಳ ಸಂಘಟನೆಯನ್ನು ಜಿಲ್ಲಾ ವ್ಯಾಪ್ತಿ ೬ ತಾಲ್ಲೂಕುಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸಂಘಟನೆಯನ್ನು ಬಲಪಡಿಸುತ್ತಾ, ಸಂಘಟನೆಗೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳತಕ್ಕದ್ದು, ಯಾವುದೇ ಹೋರಾಟಕ್ಕೂ ಅಂಜದೆ, ಸಕ್ರಿಯ ಹೋರಾಟಕ್ಕೆ ಸಿದ್ಧರಿರಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಕೂಗು ಒಗ್ಗಟ್ಟಿನ ಮುಖಾಂತರವಾಗಿ ಎಲ್ಲೂ ಲೋಪವಾಗದೆ ನೋಡಿಕೊಳ್ಳಬೇಕೆಂದು ಹೇಳಿದರು.
ಕರ್ನಾಟಕ ಸಮತಾ ಸೈನಿಕ ದಳದ ಕೋಲಾರ ಜಿಲ್ಲಾಧ್ಯಕ್ಷರಾಗಿ ಹಾರೋಹಳ್ಳಿ ಆರ್.ವೇಣು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ದಾನವಹಳ್ಳಿ ಬಿ.ಹನುಮಂತಪ್ಪ, ಜಿಲ್ಲಾ ಕಾರ್ಯಾಧ್ಯಕ್ಷರುಗಳಾಗಿ ವಿಟ್ಟಪ್ಪನಹಳ್ಳಿ ಸಿ.ವೆಂಕಟೇಶಪ್ಪ, ಗಂಗಮ್ಮನಪಾಳ್ಯ ಸಿ.ಶ್ರೀನಿವಾಸ್, ಕೆಂಬೋಡಿ ಕೆ.ಎಂ.ರವೀಂದ್ರ ಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾಗಿ ಗಾಂಧಿನಗರ ಕೆ.ವಿ.ರಾಘವೇಂದ್ರ ಪ್ರಸಾದ್, ವಡಗೇರಿ ಎಂ.ಮುನಿಯಪ್ಪ, ಜಿಲ್ಲಾ ಖಜಾಂಚಿಯಾಗಿ ಮತ್ತಿಕುಂಟೆ ಎಂ.ಎಂ.ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.