ಉತ್ತಮ ಸಮಾಜಕ್ಕಾಗಿ ಬೌದ್ಧ ತತ್ವ ಅಗತ್ಯ
ಕೋಲಾರ,ಜೂ.೭-ಇಂದು ಲೋಕದ ಜನರಕಲ್ಯಾಣಕ್ಕಾಗಿ, ಉತ್ತಮ ಚಿಂತನೆಯ ಜೀವನಕ್ಕಾಗಿ ಬುದ್ಧತತ್ವ, ಬುದ್ದಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ, ಎಂದು ಬುದ್ದಾರತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಶ್ರೀ ಅಚಲ ಸದ್ಗುರು ಸಾಧು ಸತ್ಸಂಘ ಸಂಸ್ಥೆಯ ಪೀಠಾಧ್ಯಕ್ಷ ಡಾ.ಎಂ.ಚಂದ್ರಶೇಖರ್ ನುಡಿದರು.
ಕೆ.ಜಿ.ಎಫ್ ತಾಲ್ಲೂಕು, ಅಂಡ್ರಸನ್ ಪೇಟೆ ಭೀಮಗಾನಹಳ್ಳಿ ಗ್ರಾಮದ ಸದ್ಗುರು ಶ್ರೀ ಈಶ್ವರಮ್ಮಾಜಿ ಮಠದ ಸಭಾ ಭವನದಲ್ಲಿ ಅಚಲ ಸದ್ಗುರು ಸಾಧು ಸತ್ಸಂಗ ಮತ್ತು ಕರ್ನಾಟಕ ದಲಿತಕ್ರಿಯಾ ಸಮಿತಿ ಕೋಲಾರ ರವರ ಸಹಯೋಗದಲ್ಲಿ ಅಹಿಂಸಾಮೂರ್ತಿ ಭಗವಾನ್ ಬುದ್ಧರ ೨೫೬೮ ನೇ ಜಯಂತಿ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಬುದ್ದರ ಮತ್ತು ಶ್ರೀ ಸದ್ಗುರು ಶ್ರೀ ಈಶ್ವರಮ್ಮಾಜಿಯವರುಗಳ ಭಾವಚಿತ್ರಗಳಿಗೆ ಪುಷ್ಪ ಸಮಾನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುಃಖವೆನ್ನುವುದು ಅತ್ಯಂತ ಸಹಜ ಎಂಬುವುದನ್ನು ಅರಿತು ಅದನ್ನು ಸಹಿಸುವ ಶಕ್ತಿಯನ್ನು ಹೆಚ್ಚಿಸಿಕೊಂಡಾಗ ಪ್ರತಿದುಃಖವೂ ಮುಂದಿನ ಸುಖಕ್ಕೆ ದಾರಿ ನೀಡುತ್ತದೆ. ನಮಗಿರುವ ಎರಡು ಕೈಗಳನ್ನು ಒಂದನ್ನು ನಮ್ಮ ಕೆಲಸಗಳಿಗೆ ಇನ್ನೊಂದನ್ನು ಇತರರಿಗೆ ಸಹಾಯ ನೀಡಲು ಉಪಯೋಗಿಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಮಾನವರಾದ ನಾವು ಯಾವಾಗಲು ಸನ್ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು,
ಸನ್ಮಾರ್ಗ ಅನು ಸರಿಸುವುದೇಂದರೆ ಬೌದ್ಧಧಮ್ಮದ ಜೀವನ ರೀತಿಯನ್ನು ಅನುಸರಿಸುವುದು ಎಂದರ್ಥ. ಮಾನವರು ಸದಾ ಜಾಗೃತನಾಗಿರಬೇಕು ಸೋಮಾರಿತನ ಬೇಡ, ಮೂಢನಂಬಿಕೆ, ಕಂದಾಚಾರ, ಸುಳ್ಳು ಸಿದ್ದಾಂತಗಳನ್ನು ನಂಬಬೇಡ, ಬೌದ್ಧಧರ್ಮದಲ್ಲಿ ವ್ಯಕ್ತಿಯ ಉನ್ನತಿ-ಅವನತಿಗೆ ಕಾರಣಗಳು, ಉತ್ತಮ ಮತ್ತುದುಷ್ಟ ವ್ಯಕ್ತಿಯ ಲಕ್ಷಣಗಳು. ಸತ್ಕಾರ್ಯ ಮತ್ತು ನಿರ್ಣಯಗಳ ಬಗ್ಗೆ ಗೌತಮ ಬುದ್ದ ತಿಳಿಸಿರುವುದನ್ನು ಎಲ್ಲರೂ ಪಾಲಿಸುವಂತಾಗ ಬೇಕೆಂದರು
ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ದುಃಖದಿಂದ ಕೂಡಿರುತ್ತಾನೆ, ಈ ದುಃಖವನ್ನು ಹೋಗಲಾಡಿಸುವ ಬಗ್ಗೆ ಹೇಗೆ ? ಎಂದು ಬೋಧಿವೃಕ್ಷದ ಅಡಿ ಕುಳಿತ ತಪಸ್ಸಿನಲ್ಲಿ ಜ್ಞಾನೋಧಯ ನಂತರ ಗೌತಮರು ಕಂಡುಕೊಂಡರು. ಬುದ್ದರು ಅಹಿಂಸೆ ಕುರಿತಂತೆ ಎಲ್ಲರನ್ನು ಪ್ರೀತಿಸುವುದನ್ನು ಅರಿಯಬೇಕೆಂದು ತಿಳಿಸಿದ ಅವರು ಗೌತಮ ಬುದ್ಧರ ಜೀವನ ಚರಿತ್ರೆಯನ್ನು ಆದರ್ಶವಾಗಿ ಪರಿಗಣಿಸಿ ಜೀವನದಲ್ಲಿ ಅಳವಡಿಸಿ ಕೊಳ್ಳುವಂತಾಗ ಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಅಚಲ ಸದ್ಗುರು ಸಾಧು ಸತ್ಸಂಗ ಭೀಮಗಾನಹಳ್ಳಿ ಧರ್ಮದರ್ಶಿಗಳಾದ ಎ. ಸರಳಾವತಿ, ಸಿ.ಅಮರ್‌ನಾಥ್, ಮುತ್ತೇನಹಳ್ಳಿ ಮುನಿಕೃಷ್ಣಪ್ಪ ಕಾರ್ಯದರ್ಶಿ, ಸದಸ್ಯರಾದರವಿ, ನಿಜಾನಂದಗೆಸಕಪಲ್ಲಿ, ಶ್ರೀನಿವಾಸಲು ಚಿನ್ನಗೊಲ್ಲಪಲ್ಲಿ ರಾಮಾನಂದ ಗಟ್ಟೂರು, ಗಣೇಶಕುಪ್ಪಂ, ಸಂತೋಷ ಬೆಂಗಳೂರು, ಆಂಜಿನಪ್ಪ-ಅಮರನಾರಾಯಣ ಎಂ. ಕೊತ್ತೂರು, ನಾಗರತ್ನಮ್ಮ ಬಲ್ಲೇರಪಲ್ಲಿ ಮುನಿವೆಂಕಟಮ್ಮ ಗಟ್ಟೂರು, ನಾಗಮ್ಮ ಭಾಗವಹಿಸಿದ್ದರು.