ವಿದ್ಯಾರ್ಥಿಗಳು ತಯಾರಿಸಿದ 7500 ಬಿತ್ತಿ ಪತ್ರ ಬಿಡುಗಡೆ
ವಿಜಯಪುರ.ಜೂ.೭:ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ ೫ರಂದು ಹುಟ್ಟು ಹಬ್ಬದ ರೀತಿ ಒಂದು ದಿನ ನಿಗಧಿ ಮಾಡಿರುವುದು ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಎಂದು ಪ್ರಗತಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಕೃಪಾಶಂಕರ್ ತಿಳಿಸಿದರು.
ಪಟ್ಟಣದ ಬಸ್ ನಿದ್ದಾಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಬಿಎಂಟಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆಗೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ ಪ್ರತಿ ವರ್ಷದಂತೆ ನಮ್ಮ ಶಾಲೆ ವತಿಯಿಂದ ಒಂದು ಒಂದು ವರ್ಷ ವಿವಿಧ ರೀತಿಯ ಥೀಮ್ ತೆಗೆದುಕೊಂಡು ಪರಿಸರದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ವಿದ್ಯಾರ್ಥಿಗಳು ಬಸ್ ಗಳಿಗೆ ಹೋಗಿ ಸಾರ್ವಜನಿಕರಿಗೆ ನೀವು ಪಡೆಯುವ ಪ್ಲಾಸ್ಟಿಕ್ ವಸ್ತುಗಳನ್ನು ಬಸ್ ನಿಂದ ಎಲ್ಲದರಲ್ಲಿ ಹಾಕುವುದು ಬೇಡ, ಪುರಸಭಾ ಅಥವಾ ನಗರ ಸಭೆಯ ಕಸದ ಬುಟ್ಟಿಗೆ ಹಾಕುವುದರಿಂದ ಪರಿಸರ ಉಳಿಸಬಹುದು ಎಂದು ತಿಳಿಸಿದರು.
ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ಮಾತನಾಡಿ ಸ್ವಚ್ಛ ಭೂಮಿ ನಮ್ಮೆಲ್ಲರ ಹಕ್ಕು ಎಂಬ ಘೋಷ ವ್ಯಕ್ಯದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಾವು ಬಂದಿದ್ದೇವೆ, ನಾವು ರಜೆಗಳಲ್ಲಿ ಐತಿಹಾಸಿಕ ತಾಣಗಳಿಗೆ ತೆರಳಿದಾಗ ಅಲ್ಲಿನ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಪರಿಸರವನ್ನು ನಾವು ಉಳಿಸಿದರೆ ನಾವು ಉಳಿಯ ಬಹುದು ಇಲ್ಲವಾದರೆ ನಮಗೆ ತೊಂದರೆ ಆಗುತ್ತದೆ, ಪರಿಸರದಲ್ಲಿ ಮಣ್ಣು, ನೀರು, ಗಾಳಿ ಇವುಗಳನ್ನು ಹಾಳು ಮಾಡಿದರೆ ನಮಗೆ ಅಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳಿಗೂ ತೊಂದರೆ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ಬಸ್ ನಿಲ್ದಾಣದಲ್ಲಿ ಇರುವ ಬಸ್ ಗಳಿಗೆ ಹೋಗಿ ಪರಿಸರದ ಬಗ್ಗೆ ಸಾರ್ವಜನಿಕರಿಗೆ ಸ್ವತಃ ಬರೆದ ಬಿತ್ತಿ ಪತ್ರಗಳನ್ನು ನೀಡಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳೆ ಸ್ವತಃ ಬರೆದ ೭೫೦೦ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ.ಬಸವರಾಜ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್, ಕೆ.ಎಸ್.ಆರ್.ಟಿ.ಸಿ ವಿಜಯಪುರ ಶಾಖೆಯ ಅಧಿಕಾರಿ ಶ್ರೀನಿವಾಸ್, ಬಿ.ಎಂ.ಟಿ.ಸಿ ವಿಜಯಪುರ ಅಧಿಕಾರಿ ಕಣ್ಣಪ್ಪ, ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ನಾರಾಯಣಸ್ವಾಮಿ, ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
ಈ ಮೇಲ್‌ನಲ್ಲಿ ಫೋಟೋ ಕಳುಹಿಸಲಾಗಿದೆ.
೫-ವಿಜ್.೩ಎ.ವಿಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಗತಿ ಪ್ರೌಢಶಾಲೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡುವ ವಿದ್ಯಾರ್ಥಿಗಳೆ ಸ್ವತಃ ಬರೆದ ೭೫೦೦ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿರುವುದು.