ಪ್ರತ್ಯೇಕ ಅಪಘಾತ: ಇಬ್ಬರು ಬೈಕ್ ಸವಾರರ ಸಾವು
ಕಲಬುರಗಿ,ಜೂ.6-ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ನಗರದ ಹೀರಾಪುರ ರಿಂಗ್ ರಸ್ತೆಯಲ್ಲಿ ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಖರ್ಗೆ ಕಾಲೋನಿಯ ನಿವಾಸಿ ಸಾಗರ ಗುಂಡಪ್ಪ ಪೂಜಾರಿ (25) ಎಂಬಾತ ಮೃತಪಟ್ಟಿದ್ದಾನೆ. ನಿನ್ನೆ ಮಧ್ಯಾಹ್ನ ಗೃಹಬಳಕೆಯ ಸಾಮಾಗ್ರಿ ತರಲೆಂದು ಟಿವಿಎಸ್ ಮೇಲೆ ನೆಹರು ಗಂಜ್‍ಗೆ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಜೇವರ್ಗಿ-ಕಲಬುರಗಿ ರಸ್ತೆಯ ಸೋಮನಾಥಪುರ ಹತ್ತಿರ ಕಾರು-ಬೈಕ್ ನಡುವೆ ಡಿಕ್ಕಿ ಸಂಭವಿಸಿ ಜೇವರ್ಗಿ ತಾಲ್ಲೂಕಿನ ಕುಮ್ಮನಸಿರಸಗಿ ನಿವಾಸಿ ಮಹಿಬೂಬಸಾಬ್ ಖುದಾನ್ ಸಾಬ್ ಮಕಾನದಾರ (47) ಎಂಬಾತ ಮೃತಪಟ್ಟಿದ್ದಾನೆ. ಕುಮ್ಮನಸಿರಸಗಿಯಿಂದ ಕಲಬುರಗಿಯ ಮಕ್ಕಾ ಕಾಲೋನಿಯಲ್ಲಿರುವ ಮನೆಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಂಚಾರಿ ಪೊಲೀಸ್ ಠಾಣೆ-1 ಮತ್ತು 2ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.