ನೀಟ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ 700 ಅಂಕ ಪಡೆದ ಅಭಿಷೇಕ ಭಂಢಾರಕವಠೆ
ವಿಜಯಪುರ,ಜೂ.6:ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ವಿಜಯಪುರದ ಎಕ್ಸಲೆಂಟ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು 720 ಅಂಕಗಳಿಗೆ ಅಭಿಷೇಕ ಭಂಢಾರಕವಠೆ 700, ಬಿರೇಶ ಸಿ. ಹನಕನಹಳ್ಳಿ 690, ಬಸವರಾಜ ಎಸ್. ತುಕ್ಕನ್ನವರ 685, ಪ್ರಜ್ವಲ್ ಆರ್. ಸುರಗಿಹಳ್ಳಿ 680, ಪ್ರತಿಕ್ಷಾ ಜೆ. ವಾಲಿ 677, ಅಮೋಘ ಎ. ಹೊನ್ನುಂಗರ 675, ಆನಂದ ಹೆಚ್. ಬಿಳ್ಳೂರ 672, ಕಿರಣಕುಮಾರ ಬೆಳಗಲಿ 667, ಸಾಯೀದ್‍ಅಯುಬ್ ಜಮಾದಾರ 656, ಪೂಜಾ ಭಾಗೋಜಿ 654, ತೇಜಶ್ವಿನಿ ಎಮ್. ಸವದಿ 651, ಭೂಮಿಕಾ ಬಿ. ಕನಸೆ 647, ಸಮರ್ಥ ಕುಲಕರ್ಣಿ 647, ಕಿರಣಕುಮಾರ ಜೆ. ತುಮರೆಕೊಪ್ಪ 643, ಮೊಹಮ್ಮದ್‍ರಿಹಾನ ಎಮ್. ಅಗಸಬಾಳ 642, ಸಮರ್ಥ 640, ಸದಾಫ್ ಸುತಾರ 638, ಅಪಶಾ ಜಬೀನ ಎಫ್.ಅತ್ತಾರ 635, ನಿತೀಶ ಬಿ. ಜುಮನಾಳ 630, ಜೈನುದ್ದಿನ್ ರೋಜಿನ್ದಾರ 628, ಸಲೋನಿ ಎಂ. ಕಲ್ಲೂರ 627, ಸಂಜೀವನಿ ಡೊಳ್ಳಿ 626, ಭಾಗ್ಯಶ್ರೀ ಎಸ್. ದೇವರ 625, ಭಾಗ್ಯ ಅರಕೇರಿ 623, ಸಾಹೀಲ್ ಆರ್. ಹುನಗುಂದ 622, ಸರಸ್ವತಿ ಎಂ ಸವದತ್ತಿ 618, ವಿಶಾಲಾ ಸಿ. ಹತ್ತಿ 616, ನಿಖಿಲ್ ಜಿ. ಉಮರಾಣಿ 612, ಸಂತೋಷ ಕೆ. ಪನ್ನೂರ 611 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
36 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕಗಳು ಹಾಗೂ 92 ವಿದ್ಯಾರ್ಥಿಗಳು 500 ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಪ್ರಾಂಶುಪಾಲರಾದ ಶ್ರೀಕಾಂತ ಕೆ. ಎಸ್. ಕಾಲೇಜಿನ ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತ ಪಡಿಸಿದ್ದಾರೆ.