ಮಟಕಾ: ಓರ್ವನ ಬಂಧನ
ಕಲಬುರಗಿ,ಜೂ.6-ಸೈಯದ್ ಚಿಂಚೋಳಿ ಕ್ರಾಸ್ ಹತ್ತಿರ ಮಟಕಾ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆಯ ಪಿಐ ಮೊಹಮ್ಮದ್ ಫಸಿಯೋದ್ದಿನ್, ಸಿಬ್ಬಂದಿಗಳಾದ ವೆಂಕಟೇಶ, ಅನೀಲ, ನಾಗೇಂದ್ರ ಮತ್ತು ಪ್ರಕಾಶ ಅವರು ದಾಳಿ ನಡೆಸಿ ಸೈಯದ್ ಚಿಂಚೋಳಿ ಕ್ರಾಸ್‍ನ ಶಿವಾನಂದ ಲಂಗಾರ (64) ಎಂಬಾತನನ್ನು ಬಂಧಿಸಿ 2024 ರೂ.ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಮುನೀರ್ ಎಂಬಾತ ಪರಾರಿಯಾಗಿದ್ದಾನೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.