ವಾಯುಮಾಲಿನ್ಯ ತಡೆಗಟ್ಟಲು ಗಿಡ-ಮರ ಬೆಳೆಸಿ:ಶಿಕ್ಷಕಿ ಪ್ರತಿಭಾ ತೊರವಿ
ಕೊಲ್ಹಾರ:ಜೂ.6:ಪರಿಸರ ಉಳಿಯಬೇಕಾದರೆ ಪ್ರತಿಯೊಬ್ಬರು ಗಿಡ ಮರ ಬೆಳಸಬೇಕು ಎಂದು ಸಹಶಿಕ್ಷಕಿ ಪ್ರತಿಭಾ ತೊರವಿ ಹೇಳಿದರು.
ಕೂಡಗಿ ಕೆ ಪಿ ಎಸ್ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು
ಸ್ವಂತ ಖರ್ಚಿನಲ್ಲಿ ಸಸಿಗಳು ಹಾಗೂ ಮಡಿಕೆಗಳನ್ನು ತಂದು ಸಸಿ ನೆಟ್ಟು ಮಾತನಾಡುತ್ತಾ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಕ್ಕಳಿಗೆ ತಿಳಿಹೇಳಿದರು.
ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆ,ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು ಪರಿಸರ ಉಳಿಯಬೇಕಾದರೇ ಹೆಚ್ಚು ಗಿಡ ಮರ ಬೆಳಸಬೇಕು ಎಂದರು.
ಗ್ರಾಮದ ಹಿರಿಯರಾದ ಸಾಹೇಬಗೌಡ ಪಾಟೀಲ,ಮಲ್ಲಿಕಾರ್ಜುನ ದೊಡಮನಿ,ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆಯರಿಗೆ ಎನ್ ಜಿ ನಂದಿಕೋಲಮಠ ಸಹಶಿಕ್ಷಕರಾದ ಸುಜಾತಾ ಸಿದ್ದರಾಮಯ್ಯ, ಜಿ ಬಿ ಗಲಗಲಿ,ಗೀತಾ ಜಾಲವಾದಿ,ಭಾಗ್ಯಶ್ರೀ ಕಲಕೇರಿ,ಆಶಾ ಎರಡೆತ್ತಿನ ಉಪಸ್ಥಿತರಿದ್ದರು.