ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ ಪರಿಸರ ದಿನಾಚರಣೆ
ವಿಜಯಪುರ,ಜೂ.6:ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಕೆ.ಎನ್ ರಮೇಶ್ ಅವರು ತೆಂಗಿನ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಪಕ್ಕದಲ್ಲಿ ಆರಂಭಿಸಿರುವ ಮಾಧ್ಯಮ ತೋಟದಲ್ಲಿ ವಿವಿಧ ಹಣ್ಣಿನ ಸಸಿಗಳನ್ನು ನೆಡಲಾಯಿತು.
ಕೇವಲ ವನಮಹೋತ್ಸವದ ಸಂದರ್ಭದಲ್ಲಿ ಸಸಿ ನಡೆಯುವುದಷ್ಟೇ ಅಲ್ಲ, ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಕೆ.ಎನ್.ರಮೇಶ ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕÀ ಸಂದೀಪ ನಾಯಕ, ಡಾ.ತಹಮೀನಾ ಕೋಲಾರ್, ಕೊಪ್ಪಳದ ಸಹಾಯಕ ಪ್ರಾಧ್ಯಾಪಕ ಡಾ.ನರಸಿಂಹ, ರಾಣಿಬೆನ್ನೂರಿನ ಸಹಾಯಕ ಪ್ರಾಧ್ಯಾಪಕ ಡಾ.ರವೀಂದ್ರಕುಮಾರ್ ಬಣಕಾರ, ಪ್ರಜಾವಾಣಿಯ ಗ್ರಾಫಿಕ್ ಡಿಸೈನರ್ ಮಂಜುನಾಥ ಹುಲಕೊಪ್ಪದ, ವಿಜಯಕರ್ನಾಟಕದ ಗ್ರಾಫಿಕ್ ಡಿಸೈನರ್ ಧೀರಜ್, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ರರ ವಿದ್ಯಾರ್ಥಿನಿಯರು, ಗ್ರಾಫಿಕ್ ಡಿಸೈನಿಂಗ್ ಕಾರ್ಯಾಗಾರದಲ್ಲಿ ಭಾಗವಹಿಸಲು ಆಗಮಿಸಿರುವ ಬಾಗಲಕೋಟೆ, ಮುಧೋಳ ಹಾಗೂ ಹುಬ್ಬಳ್ಳಿ ಕಾಲೇಜುಗಳ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.