ಮುಕಾರ್ತಿಹಾಳದ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ವಿಜಯಪುರ,ಜೂ.6:ಜಿಲ್ಲೆಯ ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಸಸಿಯನ್ನು ನೆಡುವುದರ ಮೂಲಕ ಬುಧವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಗುರು ಮಾತೆ ಚೈತ್ರಾ ಗುಳೇದಗುಡ್ಡ, ಮಕ್ಕಳಿಗೆ ಚಿಕ್ಕಂದಿನಿಂದಲೇ ಸಸಿ ನೆಡುವುದರ ಮೂಲಕ ಅವರಲ್ಲಿ ಪರಿಸರ ಕಾಳಜಿ, ಪ್ರಜ್ಞೆ ಬೆಳೆಸಬೇಕಾಗಿದೆ, ನಮ್ಮ ಭೂಮಿ ನಮ್ಮ ಪರಿಸರ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಕೀರ್ತಿ ಚಿಮ್ಮಲಗಿ, ವಿದ್ಯಾ ನರಸರೆಡ್ಡಿ, ಜಗದೀಶ ಕಾಸಿನಕುಂಟಿ, ಕಾಶಿಬಾಯಿ ಪಾಟೀಲ ಸೇರಿದಂತೆ ಶಾಲೆಯ ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು.