ಅಲ್ ಹಸ್ನಾತ್ ಕಾಲೇಜಿನಲ್ಲಿ ಪರಿಸರ ದಿನ ಆಚರಣೆ
ವಿಜಯಪುರ,ಜೂ.6:ನಗರದ ಅಲ್ ಹಸ್ನಾತ ಸಂಸ್ಥೆಯ ಅಲ್ ಹಸ್ನಾತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎಮ್.ಡಿ. ರೂಗಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಬದುಕು ಯಾವಾಗಲೂ ಸಸಿಯಂತೆ ಮೃದುವಾಗಿರುತ್ತದೆ. ಮಕ್ಕಳು ಮುಂದೆ ಸಸಿಯಂತೆ ಬೆಳೆದು ಮರವಾಗಿ ಹಣ್ಣು ಕೊಡುವವರಿಗೂ ತಂದೆ ತಾಯಿಯ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಜ್ಞಾನ ನೀಡುವ ಈ ದೇಗುಲದಲ್ಲಿ ಪೂಜಾರಿಗಳಾದ ಶಿಕ್ಷಕರು ನಿರಂತರವಾಗಿ ಬೋಧಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಶಮಶರಲಿ ಮುಲ್ಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು ಎಂದು ಹೇಳಿದರು.
ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಿವಿಧ ವಿಭಾಗಗಳಲ್ಲಿಯೂ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಪ್ರೌಢಶಾಲೆ ವಿಭಾಗದ ಮುಖ್ಯ ಗುರುಗಳಾದ ಫರೀದ ಹರಿಯಾಲ, ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳಾದ ಝಿಯಾಉಲ್ಲಹಕ್ ಅವಟಿ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.