ಪರಿಸರ ರಕ್ಷಣೆ ನಮ್ಮೇಲ್ಲರ ಜವಾಬ್ದಾರಿ:ಪಾಟೀಲ
ತಾಳಿಕೋಟೆ:ಜೂ.6: ಪಟ್ಟಣದ ಶ್ರೀ ಸಂಗಮಾರ್ಯ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಪರಿಸರಕ್ಕೆ ವಿರೂದ್ದವಾದ ಅನೇಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಸಾಗಿದ್ದರ ಪರಿಣಾಮ ಇಂದು ಮಾನವನಿಗೆ ಪ್ರಕೃತಿಯಿಂದ ಅನೇಕ ತೊಂದರೆಗಳು ಬರತೊಡಗಿವೆ ನಾವು ಮಾಡುವ ಕೆಲಸದಲ್ಲಿ ಅನೇಕ ನಿರೂಪಯುಕ್ತ ವಸ್ತುಗಳಾದ ಪ್ಲಾಸ್ಟಿಕ್ ಕ್ಯಾರಿಬ್ಯಾಗ, ಮತ್ತು ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಾ ಸಾಗುತ್ತಿರುತ್ತೇವೆ ಆದರೆ ಅದು ನಮ್ಮಿಂದ ಆಗುತ್ತಿದ್ದರೂ ಕೂಡಾ ಅದು ನಮಗೆ ಗೊತ್ತಾಗುವದಿಲ್ಲಾ ಎತ್ತೆಚ್ಚವಾಗಿ ನಡೆದುಕೊಳ್ಳುತ್ತಾ ಸಾಗಿದೆ ಅದಕ್ಕಾಗಿ ನಾವು ಮೊದಲು ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನಾನು ಬಳೆಸುತ್ತೇನೆಂಬ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಕಾಲ ಕ್ರಮೇಣವಾಗಿ ಗಿಡಮರಗಳನ್ನು ಹಚ್ಚಿ ಬೆಳೆಸುವ ಬದಲು ಅವುಗಳನ್ನು ಕಡಿದು ನಾಶ ಮಾಡುತ್ತಾ ಸಾಗಿದ್ದರ ಪರಿಣಾಮ ಬಿಸಿಲಿನ ಉಷ್ಣತೆ ಈ ಭಾರಿ 50 ಡಿಗ್ರಿ ಕ್ಕಿಂತಲೂ ಹೆಚ್ಚಿಗೆ ಕಂಡಿದ್ದೇವೆ ಇಂತಹ ಬಿಸಿಲಿನಿಂದ ಅನೇಕ ತೊಂದರೆಗಳನ್ನು ನಾವು ನೀವು ಅನುಭವಿಸಿದ್ದೇವೆ ಕಾರ್ಬನ್ ಡೈಆಕ್ಸೈಡ್‍ನ ಪ್ರಮಾಣ ಅಧಿಕವಾಗುತ್ತಿದೆ ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ಮನುಕುಲದ ನಾಶವಾಗುವ ಕಾಲ ಸನ್ನಿತಕ್ಕೆ ನಾವೇ ತಂದುಕೊಂಡಂತಾಗಲಿದ್ದು ಅದಕ್ಕೆ ಪ್ರತಿಯೊಬ್ಬರು ಅರ್ಥೈಸಿಕೊಂಡು ಪ್ರಕೃತಿಗೆ ವಿರೂದ್ದವಾಗಿ ನಡೆದುಕೊಳ್ಳದೇ ಅದಕ್ಕೆ ಪೂರಕವಾದ ಸಸಿಗಳನ್ನು ಹೆಚ್ಚಿಗೆ ನೆಟ್ಟು ಅವುಗಳನ್ನು ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಮರಗಳನ್ನಾಗಿ ಪರಿವರ್ತಿಸುವಂತಹ ಕಾರ್ಯ ಮಾಡಬೇಕೆಂದರು.
ಈ ಕಾರ್ಯಕ್ರಮದಲ್ಲಿ ಎಸ್.ಎಸ್.ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುನೀಲ.ಎಚ್.ಪಾಟೀಲ, ಕಿರಣ್.ಎಚ್.ಪಾಟೀಲ. ಹಾಗೂ ಶಿಕ್ಷಕರಾದ ಅಶೋಕ. ಕಟ್ಟಿ, ಎಚ್.ಬಿ.ಪಾಟೀಲ, ಸಂತೋಷ ಜಾಮಗೊಂಡಿ, ಗುಡಗುಂಟಿ, ಎಂ.ಎಸ್.ರಾಯಗೊಂಡ, ಎಸ್.ಬಿ.ಸಾಸನೂರ, ಬಿ.ಆಯ್.ಹಿರೇಹೊಳಿ, ಕಾಶಿನಾಥ ನಾಲತವಾಡ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.