ದೇವರು, ಧರ್ಮ ಮತ್ತು ಗುರುವನ್ನು ಮರೆಯದಿರಿ: ಕಾಶೀ ಜಗದ್ಗುರುಗಳು
ಕಲಬುರಗಿ:ಜೂ.6: ಸುಖ, ಶಾಂತಿ ನೆಮ್ಮದಿಯ ಬದುಕಿಗೆ ದೇವರು ಧರ್ಮ ಮತ್ತು ಗುರುವನ್ನು ಮರೆಯದೇ ಬಾಳಬೇಕೆಂದು ಶ್ರೀ ಕಾಶೀ e್ಞÁನ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಮಲ್ಲಿಕಾಜುರ್ನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ಪಟ್ಟರು.
ಅವರು ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ಕಟ್ಟಿ ಹಿರೇಮಠದ ಲಿಂಗೈಕ್ಯೆ ಮಳೇಂದ್ರ ಶಿವಾಚಾರ್ಯರ ಪುಣ್ಯಾರಾಧನೆಯ ಧರ್ಮ ಸಭೆಯಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದರು ದೇವನೊಬ್ಬ ನಾಮ ಹಲವು ಯಾವ ಹೆಸರಿನಿಂದ ಕರೆದರೂ ಓಗೊಡುವ ಪರಮಾತ್ಮಾ ಒಬ್ಬನೇ ಎಂಬ ಅರಿವು ಮುಡಿದಾಗ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಸಾಧ್ಯವಾಗುತ್ತದೆ. ನುಡಿದಂತೆ ನಡೆಯುವದೇ ನಿಜವಾದ ಧರ್ಮ ಆಡುಮಾತು, ನಡೆಯುವ ದಾರಿ ಇನ್ನೊಂದಾದರೆ ಮನುಷ್ಯನಿಗೆ ಬೆಲೆ ಸಿಗುವುದಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರರ ತತ್ವವನ್ನು ಅರಿಯಲು ಗುರುಬೇಕು. ಅನ್ನ, ನೀರು, ಗಾಳಿ ಕೊಟ್ಟ ದೇವರನ್ನು ಮರೆಯಬಾರದೆಂದು ನುಡಿದರು.
ಶಖಾಪುರದ ತಪೋವನ ಮಠದ ಡಾ. ಸಿದ್ಧರಾಮ ಶಿವಾಚಾರ್ಯರು ಆಶೀರ್ವಚನದಲ್ಲಿ ಗುರುವಿಲ್ಲದ, ಗುರಿ ಇಲ್ಲದ ಜೀವನ ವ್ಯೆÉರ್ಥ, ಸಮಾಜದಲ್ಲಿ ಒರೆ ಕೊರೆಗಳನ್ನು ತಿದ್ದಿ ತೀಡುವುದೇ ಗುರುವಿನ ಧರ್ಮ, ತನ್ನಲ್ಲಿರುವ ಪ್ರತಿಭೆಯ ಶಕ್ತಿಯನ್ನು ಅರಿಯಲು ಗುರು ಮುಖ್ಯವೆಂದು ನುಡಿದರು. ಪಾಳಾದ ಶ್ರೀ ಮಠದ ಒಡೆಯರಾದ ಡಾ. ಗುರುಮೂರ್ತಿ ಶಿವಾಚಾರ್ಯರು ನೇತೃತ್ವ ವಹಿಸಿದರು. ನಾಗಣಸೂರ, ಮೈಂದರ್ಗಿ, ಶಹಾಪೂರ ಕುಂಬಾರಗೇರಿ, ಅಂಬೇಜೋಗಾಯಿ ಶ್ರೀಗಳು, ಮಾಲಗತ್ತಿಯ ಚೆನ್ನಯ್ಯಅಪ್ಪಾಗೋಳ ಇದ್ದರು. ಕರಬಸಯ್ಯ ಹಿರೇಮಠ, ಬಸವರಾಜ ಪಾಟೀಲ, ಸುಭಾಷ ಸಾಹು, ಬಾಪುಗೌಡ ಪಾಟೀಲ, ಸಂಗಪ್ಪ ಪಾಟೀಲ, ಶಾಂತಕುಮಾರ ಬನ್ನೂರ, ಶರಣಗೌಡ ಪಾಟೀಲ, ಬಸವರಾಜ ಶೀಲವಂತ ಅಂಬಲಗಿ, ಪಾಳಾ ಗ್ರಾಮದ ಗಣ್ಯರು ಇದ್ದರು. ಕಾಶೀ ಜಗದ್ಗುರುಗಳ ಅಡ್ಡ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಕುಂಬ, ಕಳಸ ಹೊತ್ತ ಸುಮಂಗಲಿಯರು ಬಾಜಾ ಭಜಂತ್ರಿಯೊಂದಿಗೆ ಗ್ರಾಮದ ಪ್ರಮುಖ ಬೀದಿಯಿಂದ ಸಾಗಿ ಬಂದು ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಪ್ರಸಾದ ವಿತರಿಸಲಾಯಿತು, ಜೇರಟಿಗಿಯ ಮಡಿವಾಳಯ್ಯಶಾಸ್ತ್ರಿ ಸರ್ವರನ್ನು ಸ್ವಾಗತಿಸಿದರು, ಯಶ್ವಂತ ಬಡಿಗೇರ ಹಾಗೂ ರಾಜೂ ಕಟ್ಟಿಸಂಗಾವಿ ಇವರಿಂದ ಸಂಗೀತ ಜರುಗಿತು. ಸಂತೋಷ ಪಾಳಾ ನಿರುಪಿಸಿದರು.