ಅರಣ್ಯ ಉಳಿಸಿ ಬೆಳೆಸುವ ಕಾರ್ಯವಾಗಲಿ
ತಾಳಿಕೋಟೆ:ಜೂ.6: ಕಾಡು ಬೆಳೆಸಿ ನಾಡು ಉಳಿಸಿ ಎಂಬ ಗಾಧೆಯಂತೆ ಕಾಡನ್ನು ಬೆಳೆಸುವದರೊಂದಿಗೆ ನಾಡನ್ನು ಉಳಿಸುವ ಕಾರ್ಯ ನಮ್ಮದಾಗಬೇಕು ಹಸಿರೇ ಉಸಿರು ಎಂಬ ಹಿರಿಯರ ಮಾತಿನಂತೆ ಮರ ಇದ್ದರೆ ಮಳೆ, ಮಳೆ ಬಂದರೆ ಬೆಳೆ ಎಂಬಂತೆ ಮರಗಳನ್ನು ಬೆಳೆಸಿ ಉಳಿಸುವ ಕಾರ್ಯ ನಮ್ಮೇಲ್ಲರದ್ದಾಗಬೇಕೆಂದು ಸ್ಥಳೀಯ ಪತಂಜಲ ಯೋಗ ಮಹಿಳಾ ಸಮಿತಿಯ ಕೋಶಾಧ್ಯಕ್ಷರಾದ ಶ್ರೀಮತಿ ರತ್ನಕಲಾ ಸರಶೆಟ್ಟಿ ಅವರು ನುಡಿದರು.
ಬುಧವಾರರಂದು ಸ್ಥಳೀಯ ವಿದ್ಯಾಭಾರತಿ ಪ್ರೌಢ ಶಾಲೆ ಹಾಗೂ ಪತಂಜಲಿ ಯೋಗ ಮಹಿಳಾ ಸಮಿತಿ ಇವರ ಸಹಯೋಗದೊಂದಿಗೆ ವಿದ್ಯಾಭಾರತಿ ಪ್ರೌಢ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಎಲ್ಲ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಪರಿಸರವೆಂಬುದು ಎಲ್ಲರು ಜೀವಿಸುವಂತಹ ಮಹತ್ವದ್ದಾಗಿದೆ ಅಂತಹ ಪರಿಸರ ಉಳಿಸಿ ಬೆಳೆಸುವಂತಹ ಕಾರ್ಯಕ್ಕೆ ಮಕ್ಕಳಿಗೆ ಸಂಸ್ಕಾರ ಬೆಳೆಸಬೇಕೆಂದರು. ಛತ್ರಪತಿ ಶಿವಾಜಿ ಮಹಾರಾಜರಂತಹ ಭಗತ್‍ಸಿಂಗ್‍ರಂತಹ ವಿಚಾರಗಳನ್ನು ಮಕ್ಕಳಲ್ಲಿ ಅಳವಡಿಸುವಂತಹ ಕಾರ್ಯವಾಗಬೇಕು ಹಿರಿಯರಾದ ನಮ್ಮಲ್ಲಿ ಮುಂದಿನ ಮಕ್ಕಳಿಗೆ ನಾವೇನು ಕೊಡುಗೆ ನೀಡಬೇಕೆಂಬುದನ್ನು ಅರೀತುಕೊಳ್ಳಬೇಕೆಂದರು.
ಇನ್ನೋರ್ವ ವಿದ್ಯಾಭಾರತಿ ಪ್ರೌಢ ಶಾಲೆಯ ಶಿಕ್ಷಕರಾದ ಪ್ರಕಾಶ ಕಟ್ಟಿಮನಿ ಅವರು ಮಾತನಾಡಿ ವಿಶ್ವ ಪರಿಸರ ದಿನಾಚರಣೆ ಎಂಬುದು 1924ರಲ್ಲಿ ಅಮೇರಿಕಾದಲ್ಲಿ ಪ್ರಾರಂಬಿಸಲಾಯಿತು. ಅರಣ್ಯ ಸಂಪತ್ತು ಬೆಳೆಸಬೇಕು ಅದನ್ನು ಉಳಿಸಬೇಕು ಇದರಿಂದ ನಾಡು ಉಳಿಯುತ್ತದೆ ಎಂಬುದು ಅಂದಿನಿಂದ ಅರ್ಥೈಸುತ್ತಾ ಸಾಗಿಬರಲಾಗಿದೆ ಎಂದರು. ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತದೆ ಈ ಸಮಯದಲ್ಲಿ ಪ್ರತಿಯೊಬ್ಬರು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವದು ಸಂತಸದ ಸಂಗತಿಯಾಗಿದೆ ಎಂದರು. ಅರಣ್ಯ ಸಂಪತ್ತು ಬೆಳೆಸುವದರಿಂದ ಬಹಳೇ ಲಾಭವಿದೆ ಅದನ್ನು ನಾಶ ಮಾಡುವಂತಹ ಕಾರ್ಯವಾಗಬಾರದೆಂದು ಅರಣ್ಯ ಬೆಳೆಸುವದರಿಂದ ಆಗುವ ಲಾಭ ಕುರಿತು ಭಹು ಮಾರ್ಮಿಕವಾಗಿ ವಿವರಿಸಿದರು.
ಈ ಸಮಯದಲ್ಲಿ ವಿದ್ಯಾಭಾರತಿ ಪ್ರೌಢ ಶಾಲೆಯ ಕಾರ್ಯದರ್ಶಿ ಬಾಬುಸಿಂಗ್ ಹಜೇರಿ, ಮೇಲ್ವಿಚಾರಕ ಸಿ.ಎಂ.ಹಿರೇಮಠ, ಶ್ರೀನಿವಾಸ ಸೋನಾರ, ಧರ್ಮಣ್ಣ ಕಟ್ಟಿಮನಿ, ಪ್ರೌಢ ಶಾಲಾ ಉಪಾಧ್ಯಕ್ಷ ರಮೇಶ ಕುಲಕರ್ಣಿ, ಪತಂಜಲಿ ಯೋಗ ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುರೇಖಾ ಸಾಲಂಕಿ, ಉಪಾಧ್ಯಕ್ಷರಾದ ಶ್ರೀಮತಿ ಸುಮಾ ಹಿರೇಮಠ, ಸುವರ್ಣಾ ರಾಯಕರ, ಮೀನಾಕ್ಷೀ ಪಾಟೀಲ, ಶ್ರೀಮತಿ ಜಾಲವಾದಿ, ಜಯಾ ಪಾಟೀಲ, ಸೀಮಾ ಚವ್ಹಾಣ, ಶೈಲಜಾ ಬಬಲೇಶ್ವರ, ಜೈಯಶ್ರೀ ಬಬಲೇಶ್ವರ, ರೇಣುಕಾ ಕಾರ್ಜೋಳ, ಸುರೇಖಾ ಬಿಳೇಭಾವಿ, ಬಸಂತಿ ಅಗರವಾಲಾ, ಪಾರ್ವತಿ ಬಬಲೇಶ್ವರ, ಮೊದಲಾದವರು ಉಪಸ್ಥಿತರಿದ್ದು ವಿದ್ಯಾಭಾರತಿ ಪ್ರೌಢ ಶಾಲಾ ಆವರಣದಲ್ಲಿ ಪ್ರತಿಯೊಬ್ಬರು ಸಸಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.