ಪರಿಸರ ಮಾನವನ ಮೂಲ ಸಂಪತ್ತಾಗಿದೆ:ಮಂಗಳೂರ
ತಾಳಿಕೋಟೆ:ಜೂ.6: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಅವರು ಸಸಿ ನೆಡೆಸಿ ನೀರು ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಪರಿಸರವೆಂಬುದು ಮಾನವನ ಮೂಲ ಸಂಪತ್ತಾಗಿದೆ ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ಪರಿಸರವೆಂಬುದನ್ನು ಕೆವಲ ಸಸಿ ನೆಡುವ ಕಾರ್ಯ ನಮ್ಮ ಜವಾಬ್ದಾರಿ ಎಂದು ತಿಳಿದುಕೊಳ್ಳಬೇಡಿ ನಿತ್ಯ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅಂದವಾಗಿ ಸುಂದರವಾಗಿ ಇಟ್ಟುಕೊಳ್ಳಬೇಕು ಇದರಿಂದ ಉತ್ತಮ ಗಾಳಿ, ಉತ್ತಮ ವಾಯು ಮಾಲಿನ್ಯ ಸಿಗಲು ಸಾದ್ಯವಾಗಲಿದೆ ಮಾನವನ ಮೂಲ ಸಂಪತ್ತಾದ ಉತ್ತಮವಾದ ಆರೋಗ್ಯವನ್ನು ಎಲ್ಲರೂ ಕಾಪಾಡಿಕೊಳ್ಳಲು ಸಾದ್ಯವಾಗಲಿದೆ ಎಂದರು.
ಈ ಸಮಯದಲ್ಲಿ ಮುಖ್ಯ ಅಥಿತಿಗಳಾಗಿ ಮುಖಂಡರಾದ ಸಂಗನಗೌಡ ಅಸ್ಕಿ, ಮುಖ್ಯೋಪಾಧ್ಯಾಯ ಸಂತೋಷ ಪವಾರ, ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ರಸೂಲಸಾ ತುರಕಣಗೇರಿ, ಶೀವಲಿಲಾ ಚುಂಚುರ, ರೂಪಾ ಪಾಟೀಲ, ಭೀಮನಗೌಡ ಸಾಸನೂರ, ಲಕ್ಷ್ಮೀ ಚುಂಚುರ, ಮುಬಿನ ಮುರಾಳ, ರವಿ ಬಿರಾದಾರ, ಮೇಘಾ ಪಾಟೀಲ, ಜ್ಯೋತಿ ನಾಯ್ಕ, ಶರಣಗೌಡ ಕಾಚಾಪೂರ, ವಿದ್ಯಾರ್ಥಿಗಳು ಇದ್ದರು.