ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ
ಕಾಳಗಿ :ಜೂ.6: ತಾಲೂಕಿನ ಗೋಟುರ ಗ್ರಾಮದಲ್ಲಿ ಜೂನ್ 5 ರಂದು ಪರಿಸರ ದಿನಾಚರಣೆಯ ಅಂಗವಾಗಿ ಗ್ರಾಮ ಪಂಚಾಯತ ಸಹಯೋಗದೊಂದಿಗೆ ಸರಕಾರಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ” ನಮಗಾಗಿ ಊರು ಊರಿಗಾಗಿ ಹಸಿರು ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಬಸವರಾಜ ಝಳಜಿ, ಗ್ರಾಮ ಪಂಚಾಯತ ಅಧ್ಯಕ್ಷ ಶಿವಕುಮಾರ ಕಮಕನೂರ, ಅರಣ್ಯ ಉಪವಲಯಧಿಕಾರಿ ಜಟ್ಟೆಪ್ಪ ನಾವಿ, ಶಿವಾನಂದ ಕಲಬುರಗಿ, ಬಸವಂತಪ್ಪ ಧನೋಜಿ, ವಿಶ್ವನಾಥ ಕಾಮರೆಡ್ಡಿ, ಶಿವಲಿಂಗಪ್ಪ ಮಡಿವಾಳ, ಅಮರ ಗವ್ಹಾರ, ಗಣಪತಿ ಬಡಿಗೇರ್, ಶಾಮರಾವ್ ಸಜ್ಜನ್, ಚಿತ್ರೀಶೇಖರ ಅಂಕಲಗಿ, ರಾಮಲಿಂಗ ಸೌಕಾರ್, ಮಹೇಶ ಸಾವಳಗಿ ಸೇರಿದಂತೆ ಊರಿನ ಪ್ರಮುಖರು ಇದ್ದರು.