ವಿವಿಧ ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿನೀಡಿ ರಸಗೊಬ್ಬರ ಬಿತ್ತನೆ ಬೀಜದ ದಾಸ್ತಾನುಗಳ ಪರಿಶೀಲನೆ
ಕಲಬುರಗಿ,ಜೂ.06:ಜಿಲ್ಲೆಯಲ್ಲಿ 2024ರ ಮುಂಗಾರು ಹಂಗಾಮು ಬಿತ್ತನೆ ಪ್ರಾರಂಭವಾಗಿದ್ದು, ರೈತರು ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಂದ ಕೃಷಿ ಪರಿಕರಗಳನ್ನು ಖರೀದಿಸುತ್ತಿರುವ ಹಿನ್ನಲೆಯಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಮತ್ತು ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಸತೀಶ ಕುಮಾರ ಮತ್ತು ಚಂದ್ರಕಾಂತ ಜೀವಣಗಿ ಅವರು ಬುಧವಾರ ಕಲಬುರಗಿ ನಗರದ ವಿವಿಧ ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ಅನೀರಿಕ್ಷಿತ ಭೇಟಿ ನೀಡಿ ರಸಗೊಬ್ಬರ ಬಿತ್ತನೆ ಬೀಜದ ದಾಸ್ತಾನುಗಳನ್ನು ಪರಿಶೀಲಿಸಿ ಹಾಗೂ ಮಾರಾಟದ ಬಿಲ್ ಪುಸ್ತಕಗಳನ್ನು ಪರಿಶೀಲಿಸಿದರು.