ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ವಿಶ್ವ ಪರಿಸರ ದಿನಾಚರಣೆ
ಬೀದರ್: ಜೂ.6:ನಗರದ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿನ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ 5 ನೇ ಜೂನ್ ಬುಧವಾರ ರದಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಶಾಲೆಯು ಹಸಿರು ತಳಿರು ತೋರಣಗಳಿಂದ ಶೃಂಗಾರಗೊಳಿಸಲಾಗಿತ್ತು. ಎಲ್ಲ ಶಿಕ್ಷಕರರು ಸಮೃದ್ಧಿಯ ಸಂಕೇತವಾದ ಹಸಿರು ಬಣ್ಣದ ಬಟ್ಟೆ ಧರಿಸಿ ಆನಂದಿಸಿದರು. ಇಂದೇ ಶಾಲೆಯ ಪ್ರಾರಂಭದ ದಿನವಾಗಿದ್ದರಿಂದ ಮಾತೇ ಸರಸ್ವತಿಯ ಪೂಜೆಯನ್ನು ಸಂಸ್ಥೆಯ ಅಧ್ಯಕ್ಷರಿಂದ ಜರುಗಿತು.ಮಕ್ಕಳಿಗೆ ಆರತಿ ಮಾಡಿ ಕುಂಕುಮ ತಿಲಕವನ್ನು ಹಚ್ಚಿ, ತಿeಟಛಿom ಬ್ಯಾಚ್ ಗಳನ್ನು ಹಚ್ಚಿ ಸ್ವಾಗತಿಸಲಾಯಿತು. ವಿಭಿನ್ನ ರೀತಿಯ ಸ್ವಾಗತವನ್ನು ಸ್ವೀಕರಿಸಿದ ಮಕ್ಕಳ ಮುಖದಲ್ಲಿ ಹರ್ಷ ತೆಲಾಡುತಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರಿಂದ ವಿಶ್ವ ಪರಿಸರ ದಿನದ ಬಗ್ಗೆ ಭಾಷಣ ನೀಡಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ತಿಳಿಸಿ ಪರಿಸರ ಕಾಪಾಡುವಂತೆ, ಪ್ಲಾಸ್ಟಿಕ್ ನಿಷೇಧಿಸುವಂತೆ ಹಾಗೂ ಸಸಿಗಳನ್ನು ನೆಡುವಂತೆ ಜಾಗೃತಿ ಮೂಡಿಸಿದರು.
ನಂತರ ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪುರೆ ಅವರು ವಿಶ್ವ ಪರಿಸರ ದಿನ ಉದ್ದೇಶಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಎಲ್ಲೇಡೆ ಕೃಷಿ ಭೂಮಿ ನಾಶಗೊಳಿಸಿ ನಗರೀಕರಣ, ಕೈಗಾರಿಕಣಗಳಿಗಾಗಿ ಬಳಸಲಾಗುತ್ತಿದೆ ಇದು ವಿಷಾದನೀಯ ಸಂಗತಿಯಾಗಿದೆ ಹಾಗೂ ಪರಿಸರಕ್ಕೆ ಮಾರಕವಾಗಿದೆ ಎಂದು ಅವರು ತಿಳಿಸಿದರು. ಎಲ್ಲ ವಿದ್ಯಾರ್ಥಿಗಳು ಮನೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಪೆÇೀಷಿಸಬೇಕು ಎಂದು ತಿಳಿಸಿ ಗ್ಲೋಬಲ್ ಸೈನಿಕ ಅಕಾಡೆಮಿಯ ಬೆನಕನಳ್ಳಿ ಆವರಣದಲ್ಲಿ 200 ಸಸಿಗಳನ್ನು ನೆಡಲಾಗುವುದು ಎಂದು ತಿಳಿಸಿ ಅವರು ತಮ್ಮಲ್ಲಿರುವ ಪರಿಸರ ಪ್ರೇಮವನ್ನು ಮೆರೆದರು.
ಈ ವೇಳೆ ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪುರೆ,ಸುಬೆದಾರ್ ಮಡೆಪ್ಪ,, ಅಶೋಕ್,ಮುಖ್ಯ ಶಿಕ್ಷಕಿ ಜ್ಯೋತಿ ರಾಗ,ಡಾ. ಗಹನಿನಾಥ ಪಾಟೀಲ್, ಪಿ ಆರ್ ಓ ಕಾರಂಜಿ ಸ್ವಾಮಿ ,ಅಂಜಲಿ ಸ್ವಾಮಿ,ಶಿಕ್ಷಕರು, ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು.