ಪರಿಸರ ರಕ್ಷಣೆ ಸಾಮಾಜಿಕ ಕೆಲಸವಲ್ಲ ಪ್ರತಿಯೊಬ್ಬರ ರಕ್ಷಣೆ
ಬೀದರ್:ಜೂ.6: ಪರಿಸರ ರಕ್ಷಣೆ ಮಾಡುವುದು ಸಾಮಾಜಿಕ ಕೆಲಸವಲ್ಲ ಇದು ಪ್ರತಿಯೊಬ್ಬರ ಕರ್ತವ್ಯ ಅದನ್ನು ನಾವೆಲ್ಲರೂ ಪಾಲಿಸಬೇಕು – ಡಾ. ಸಂತೋಷ್ ಹಂಗರಗಿ ಎಬಿವಿಪಿಯ ಅಧ್ಯಕ್ಷರು ಹೇಳಿದರು.
ನಗರದ ವಿದ್ಯಾಶ್ರೀ ಪಬ್ಲಿಕ್ ಶಾಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಮಿತ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯನನಿಗೂ ಪರಿಸರಕ್ಕೂ ಬಹಳ ಅನನ್ಯ ಸಂಬಂಧಗಳಿದ್ದು ಅದನ್ನು ಪ್ರತಿಯೊಬ್ಬರು ರಕ್ಷಿಸಬೇಕು, ಪ್ರಕೃತಿ ನಮ್ಮ ಜೀವನಕ್ಕೆ ಉಸಿರಾಡಲು ಗಾಳಿ, ಅನೇಕ ಔಷಧೀಯ ಗುಣಗಳನ್ನು ಹೊಂದಿ ನಮಗೆಲ್ಲ ನೀಡುತ್ತಿದೆ, ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ವಸ್ತುಗಳಿಂದ ಪರಿಸರಕ್ಕೆ ಹಾನಿ ಆಗದೆ ಇರುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕು ಎಂದರು,ಸಂತೋಷ್ ಹಂಗರಗಿ ಮಾತನಾಡಿ ಎಬಿವಿಪಿ ವತಿಯಿಂದ ಆಕ್ಸಿಜನ್ ಚಾಲೆಂಜ ಎಂಬ ಹೆಸರಿನ ಅಡಿಯಲ್ಲಿ ರಾಜ್ಯಾದ್ಯಂತ ಒಂದು ತಿಂಗಳು ಕಾಲ 10 ಲಕ್ಷ ಸಸಿಗಳನ್ನು ನೆಡುವ ಅಭಿಯಾನ ನಡೆಯುತ್ತಿದೆ ಅದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಆಡಳಿತಧಿಕಾರಿಗಳಾದ ರೇಣುಕ ಮಂಗಲಿ ಮಾತನಾಡಿ ಕೃಷಿಗೂ ಮತ್ತು ಪರಿಸರಕ್ಕೂ ಪ್ರಾಮುಖ್ಯತೆಯನ್ನು ನಮ್ಮ ವಿಧ್ಯಾರ್ಥಿಗಳು ನೀಡಬೇಕು ಕಾಡುಗಳನ್ನು ರಕ್ಷಿಸಬೇಕು, ಪರಿಸರವನ್ನು ಮಾಲಿನ್ಯ ಮಾಡದಂತೆ ಜಾಗೃತಿ ಮೂಡಿಸಬೇಕು ಎಂದರು.
ಎಬಿವಿಪಿಯ ಸಂಘಟನ ಕಾರ್ಯದರ್ಶಿ ಹೇಮಂತ ಮಾತನಾಡಿ ಬೀದರ್ ನಗರದಲ್ಲಿ ವಿಧ್ಯಾರ್ಥಿಗಳು ಸುಮಾರು ಒಂದು ಲಕ್ಷ ಸೀಡ್ ಬಾಲ ಮತ್ತು ಸಸಿಗಳನ್ನು ನೆಡಲಿದ್ದೇವೆ,ಅವುಗಳನ್ನು ಸೂಕ್ತ ಸ್ಥಳಗಳಲ್ಲಿ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರಾಘವೇಂದ್ರ ಕುಲಕರ್ಣಿ, ಸಾಹಿಕಿರಣ ಎಸ್.ಎಫ್.ಡಿ ಪ್ರಮುಖ್,ನಾಗರಾಜ್ ಕಾಲೇಜ್ ಕಾರ್ಯದರ್ಶಿ, ದೈಹಿಕ ಶಿಕ್ಷಕರಾದ ರವೀಂದ್ರ ಹಿರಿಯರಾದ ಶಿವಕಾಂತ್ ಪಾಟೀಲ್ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು