ಡಾ.ಎಚ್ ನರಸಿಂಹಯ್ಯ ಶ್ರೇಷ್ಟ ಶಿಕ್ಷಣ ತಜ್ಞ, ವಿಚಾರವಾದಿ
ಕಲಬುರಗಿ:ಜೂ.6: ರಾಷ್ಟ್ರದ ಅಭಿವೃದ್ಧಿಯ ಜೀವಾಳವಾದ ಶಿಕ್ಷಣ ಕ್ಷೇತ್ರ, ದೇಶದ ಸ್ವಾತಂತ್ರ ಹೋರಾಟಕ್ಕೆ, ವೈಚಾರಿಕತೆ, ವೈಜ್ಞಾನಿಕ ಕ್ಷೇತ್ರ, ಕಲೆ,ಸಾಹಿತ್ಯ,ಸಂಸ್ಕøತಿಯ ಬೆಳವಣಿಗೆಗೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಡಾ.ಎಚ್.ನರಸಿಂಹಯ್ಯನವರು ಈ ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞರಲ್ಲಿ ಒಬ್ಬರು, ವಿಚಾರವಾದಿಯಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಡಾ.ಎಚ್.ನರಸಿಂಹಯ್ಯನವರ 104ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಮೌಢ್ಯತೆ,ಕಂದಾಚಾರ,ಅಂಧಶೃದ್ಧೆ ವ್ಯಕ್ತಿ, ರಾಷ್ಟ್ರದ ಪ್ರಗತಿಕೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿಯೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇವರು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಬ್ಬರು ಪ್ರಶ್ನಿಸದೇ ಯಾವುದೇ ವಿಷಯಗಳನ್ನು ಒಪ್ಪೊಕೊಳ್ಳಬಾರದೆಂಬ ಅವರ ಅಚಲ ನಿಲವು ಶ್ಲಾಘನೀಯವಾಗಿದೆ. ದೇಶದ ಸ್ವಾತಂತ್ರ ಹೋರಾಟಕ್ಕಾಗಿ ಸೆರೆಮನೆ ವನವಾಸ ಅನುಭವಿಸಿದ್ದಾರೆ. ಯಾವುದೇ ರೀತಿಯ ವೈಯಕ್ತಿಕ ಹಿತಾಸಕ್ತಿಯ ಬದಲಾಗಿ, ರಾಷ್ಟ್ರದ ಹಿತಾಸಕ್ತಿ ಪ್ರಮುಖವೆಂದು ದುಡಿದಿದ್ದಾರೆ. ಭೌತಶಾಸ್ತ್ರರಾಗಿ, ಶ್ರೇಷ್ಠ ಶಿಕ್ಷಣ ತಜ್ಷರಾಗಿ, ಕಲೆ,ಸಾಹಿತ್ಯ, ಸಂಸ್ಕøತಿ, ಸಂಸ್ಕಾರ, ಮಾನವೀಯ ಮೌಲ್ಯಗಳ ರಕ್ಷಕರಾಗಿ ಹೀಗೆ ಹತ್ತು ಹಲವು ಪ್ರಕಾರದಲ್ಲಿ ದೇಶ ಮರೆಯದ ಕಾರ್ಯವನ್ನು ಮಾಡಿದ್ದಾರೆಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ ಮಾತನಾಡಿ, ಅತ್ಯಂತ ಸರಳ ಜೀವನ ಸಾಗಿಸುತ್ತಿದ್ದ ಡಾ.ಎಚ್ಚೆನ್ ಅವರು, ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಮಹಾನ ಸಾಧಕ ವ್ಯಕ್ತಿಯ ಜೀವನ,ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವ ಬಳಗದ ಕಾರ್ಯ ತುಂಬಾ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾಕಾ ನೆಲ್ಲುರೆ, ಶಿಕ್ಷಕರಾದ ರೇಖಾ ಬಿ.ಪಾಟೀಲ, ಮಂಜುಳಾ ಬಿ.ನರೋಣಾ, ನಂದಿನಿ, ಸೇವಕಿ ಸುರೇಖಾ ಸಣಮನಿ, ಸಮಾಜ ಸೇವಕ ಹಣಮಂತ ಎಂ.ಕಮಲಾಪುರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.