ಭೂಮಿ ಸಂರಕ್ಷಣೆಗೆ ಪ್ರತಿದಿನ ಪರಿಸರ ಆಚರಿಸಿ : ಪಾಟೀಲ್
ಕಾಳಗಿ.ಜೂ.6: ದಿನೇ ದಿನೇ ಹೆಚ್ಚಿತಿರುವ ತಪಮಾನದಿಂದ ಭೀಮಿಯ ಅಸ್ತಿತ್ವ ಅಪಾಯದಲ್ಲಿದ್ದು. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ನಾವೆಲ್ಲರೂ ಭೂಮಿ ತಾಯಿಯಯ ಸಂರಕ್ಷಣೆಯಲ್ಲಿ ತೊಡಗಬೇಕಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಕಾಳಗಿ ಹೇಳಿದರು.
ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಶ್ರೀ ಶಾಂತೇಶ್ವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರಕೃತಿ ವಿಚಾರದಲ್ಲಿ ಮಾನವ ನಿರ್ದಿಯಿಯಾಗಿ ವರ್ತಿಸುತಿದ್ದಾನೆ. ಆಧುನಿಕತೆಯ ಪರಿಣವಾಗಿ ಅನೇಕ ರೀತಿಯಲ್ಲಿ ಪರಿಸರ ನಾಶ ಮಾಡಿ ಪ್ರಕೃತಿ ಮಾಲಿನ್ಯ ಮಾಡುತ್ತಿದಾನೆ. ಇದರ ಪರಿಣಾಮ ಇಂದು ಜಾಗತಿಕ ತಪಮಾನ ಹೆಚ್ಚಾಗಿರುವುದಕ್ಕೆ ಇದ್ದಕ್ಕೆ ಉತ್ತಮ ಉದಾಹರಣೆಯಾಗಿದ್ದು ನಾವು ಪ್ರತಿ ವರ್ಷ ಜೂನ್ 5 ಕ್ಕೆ ಮಾತ್ರ ಪರಿಸರ ದಿನ ಆಚರಿಸುವ ಬದಲಾಗಿ ಪ್ರತಿ ದಿನ ಪರಿಸರ ದಿನ ಆಚರಿಸಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಭೂತಾಯಿಯ ಸಂರಕ್ಷಣೆಯಲ್ಲಿ ತೋಡಗಬೇಕೆಂದು ಹೇಳಿದರು.
ಶಾಲೆಯ ಮುಖ್ಯ ಗುರುಗಳಾದ ಸೂರ್ಯಕಿರಣ, ಮಲ್ಲಪ್ಪ ದಿಗ್ಗಾವ್ ಕೊಡದೂರ, ಸಂತೋಷ ಚವ್ಹಾಣ ಮಂಗಲಗಿ, ಮಲ್ಲಿಕಾರ್ಜುನ ಮಂಗಲಗಿ, ಊರಿನ ಹಿರಿಯರು ಶಾಲಾ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.