ಎನ್. ವಿ ಪಿಯು ಕಾಲೇಜಿನಲ್ಲಿ ಪರಿಸರ ದಿನಾಚರಣೆ
ಕಲಬುರಗಿ :ಜೂ.6: ನಗರದ ನೂತನ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ಹಾಗೂ ಇಕೋ ಕ್ಲಬ್ ವತಿಯಿಂದ ಬುಧವಾರ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಶ್ರೀ ಸತೀಶ್ ಕುಮಾರ್ ಉಮದಿ, ಜಿಲ್ಲಾ ಎನ್.ಎಸ್.ಎಸ್ ನೋಡಲ್ ಅಧಿಕಾರಿ ಎನ್. ಆರ್ ಕುಲಲಕರ್ಣಿ, ಉಪ ಪ್ರಾಚಾರ್ಯ ಡಾ. ಬಸವರಾಜ ಅಂಗಡಿ, ಉಪನ್ಯಾಸಕರಾದ
ಎಂ ಮಲ್ಲೇಶ್ವರ, ರಂಜನ್ ಯಜುರವೇದಿ, ಭಾರತೀಶ ಬೆಳಗುಂದಿ, ನಚಿಕೇತ ವಳಸಂಗಕರ್, ಡಾ.ಶಿವಾಜಿ ಮೇತ್ರೆ, ಗುರು ಲಿಂಗಯ್ಯ ಸ್ವಾಮಿ , ಮಹೇಶ್ ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.