ನೀಟ್:ಬೆಸ್ಟ್ ವಿದ್ಯಾರ್ಥಿಗಳ ಬೆಸ್ಟ್ ಸಾಧನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.06: ನೀಟ್-2024 ರ ರಾಷ್ಟ್ರಮಟ್ಟದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ, ಬೆಸ್ಟ್ ಕಾಲೇಜಿನ (ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು) ವಿದ್ಯಾರ್ಥಿಗಳಾದ ಪ್ರದೀಪ್ ಪಾಟೀಲ್ (648-ಅಂಕ), ಅನಿಲ್ ಕುಮಾರ್ (647-ಅಂಕ), ಸೈಯದ್ ಮಹಮದ್ ಅಶ್ಫಕ್ (615-ಅಂಕ), ವೈಷ್ನವಿ( 602- ಅಂಕ), ಶಶಿಧರ್ ಟಿ.ಜೆ( 593-ಅಂಕ), ಕಾಸಾ ನಿಖಿಲ್ (593- ಅಂಕ), ದರ್ಶನ್ ಎಸ್.ಆರ್(582-ಅಂಕ) , ಗೌರಿಶಂಕರ್ (570-ಅಂಕ), ಬಸಮ್ಮ (563-ಅಂಕ), ಸಯೇದಾ ಮೆಹಬೂಬ್ (561-ಅಂಕ), ಅನುಷಾ ಪಾಟೀಲ್(539-ಅಂಕ),  , ಮಧುಮತಿ (520-ಅಂಕ), ಕುಮಾರ್ (516-ಅಂಕ) , ಬಸವಲೀಲಾ (515-ಅಂಕ) ರುಷಿಕಾ (514-ಅಂಕ), ಸುಷ್ಮಾ(500-ಅಂಕ) 500 ರಿಂದ 650 ರ ಒಳಗೆ ಪ್ರದೀಪ್ ಪಾಟೀಲ್ , ಅನಿಲ್ ಕುಮಾರ್, ಮಹಮದ್ ಅಶ್ಫಕ್ ಒಳಗೊಂಡಂತೆ 25 ವಿದ್ಯಾರ್ಥಿಗಳು ಮತ್ತು 400 ಅಂಕಗಳಿಗಿಂತಲು ಹೆಚ್ಚು 45 ವಿದ್ಯಾರ್ಥಿಗಳು ಅತ್ತ್ಯುತ್ತಮ ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕೋನಂಕಿ ರಾಮಪ್ಪನವರು ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್‍ಕುಮಾರ್, ಕಾರ್ಯದರ್ಶಿಗಳಾದ ಮನ್ನೆ ಶ್ರೀನಿವಾಸುಲು, ರಾಮರಾಯುಡು, ಕಾಲೇಜು ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್, ಉಪಪ್ರಾಚಾರ್ಯರಾದ ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.