ಹುಟ್ಟುಹಬ್ಬಕ್ಕೆ  ಕೇಕ್ ಬಿಡಿ, ಸಸಿ ನೆಡಿ – ಲತಾ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.6 :- ಕೇಕ್ ತಂದು ಕಟ್ ಮಾಡಿ  ಹುಟ್ಟುಹಬ್ಬ ಆಚರಿಸಿಕೊಳ್ಳುವ  ಬದಲಾಗಿ ಒಂದು ಸಸಿ ನೆಟ್ಟು ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಪಾಠ ರೂಡಿಸಿಕೊಳ್ಳುವ ಮೂಲಕ ಪರಿಸರಕ್ಕೊಂದು ನಮ್ಮ ಸಣ್ಣ ಕೊಡುಗೆ ನೀಡುವಂತೆ ಕೂಡ್ಲಿಗಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ ಜಿ  ಲತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಬಂಡೇಬಸಾಪುರ ತಾಂಡದ  ಶ್ರೀ ಗುರು ರಾಘವೇಂದ್ರ ವಿದ್ಯಾ ಸಂಸ್ಥೆಯಡಿದಲ್ಲಿನ  ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೂಡ್ಲಿಗಿ ಅರಣ್ಯ ಇಲಾಖೆ ಸಹಭಾಗೀತ್ವದಲ್ಲಿ  ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳೊಂದಿಗೆ  ಸಸಿ ನೆಟ್ಟು  ಚಾಲನೆ ನೀಡಿ ಮಾತನಾಡುತ್ತ ಮಕ್ಕಳು ಇಂದು ನೀವು ಸಸಿ ನೆಟ್ಟು ಪಾಲನೆ ಪೋಷಣೆ ಮಾಡಿದಲ್ಲಿ ನೀವು ಬೆಳೆದಂತೆ ಸಸಿ ಮರವಾಗಿ ಬೆಳೆಯುತ್ತದೆ ಅಲ್ಲದೆ ನೀವು ಓದಿದ ಶಾಲೆ ಪರಿಸರದ ಮದ್ಯದಲ್ಲೊಂದು ಶಾಲೆಯಾಗಿ ಕಂಗೊಳಿಸುತ್ತದೆ ಎಂದು ತಿಳಿಸಿದರು.
ಸಹಾಯಕ ಅರಣ್ಯಾಧಿಕಾರಿ ಮಧುಸೂಧನ್ ಹಾಗೂ ಶ್ರೀ ರಾಘವೇಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಓಬ್ಯಾನಾಯ್ಕ್  ಮಾತನಾಡಿ ಗಿಡ ಮರಗಳಿಲ್ಲದ ಪರಿಸರ ವಿನಾಶದಿಂದ ಜಾಗತಿಕ ತಾಪಮಾನ ಏರುಪೇರಾಗಿದ್ದು ಇದರ ಸಮತೋಲನಕ್ಕೆ ಸಸಿ ನೆಟ್ಟು ಪರಿಸರ ಉಳಿಸಿ ಬೆಳೆಸದ ಹೊರತು ಬೇರೆ ದಾರಿಯೇ ಇಲ್ಲಾ ಮಕ್ಕಳಿಗೆ ಸಸಿ ನೆಟ್ಟು ಅದನ್ನು ನಿರಾಕಿ ಪೋಷಣೆ ಮಾಡುವಂತೆ ತಿಳಿಸುವ ಮೂಲಕ ಪರಿಸರ ಜಾಗೃತಿ ಅರಿವು ಮೂಡುತ್ತದೆ ಅಲ್ಲದೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಹಕಾರದಿಂದ ಪರಿಸರ ಶಾಲೆಯಾಗಿ ಮಾಡೋಣ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ವೆಂಕಟೇಶ್ ಕುಮಾರ್ ಪಿಹೆಚ್  ಮುಖ್ಯ ಗುರುಗಳಾದ ಶ್ರೀನಿವಾಸ್ ಕುಮಾರ್ ಪಿ ಹೆಚ್ ಹಾಗೂ ಸಹಾಯಕ ವಲಯಧಿಕಾರಿ  ಹೇಮಚಂದ್ರ, ನಾಗರಾಜ್  ಹಾಗೂ ಸ್ವಾಮಿ, ರವಿ, ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪತಿ  ವೆಂಕಟೇಶ್ ನಾಯ್ಕ್, ಸಂಸ್ಥೆಯ ಖಜಾಂಚಿ ನಾಗರತ್ನಮ್ಮ ವೇದಿಕೆಯಲ್ಲಿ ಆಸೀನರಾಗಿದ್ದರು.
ಈ ಸಂದರ್ಭದಲ್ಲಿ  ಸಂಸ್ಥೆಯ ಶಿಕ್ಷಕರಾದ ಶ್ವೇತಾ, ಹೆಚ್ ರತ್ನಮ್ಮ, ಶಿಲ್ಪ, ಅಶ್ವಿನಿ ಮತ್ತು  ಸಂಸ್ಥೆಯ ಉಪಾಧ್ಯಕ್ಷೆ  ಶಿಲ್ಪ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಉಮ್ಲಾ ನಾಯ್ಕ್ ಹಾಗೂ ಬಿಬಿ ತಾಂಡದ ಹಟ್ಟಿ ಗೌಡರಾದ  ಅಮ್ಮಣ್ಣ ನಾಯ್ಕ್ ಸೇರಿ ಶಾಲಾ ಮಕ್ಕಳು, ಪಾಲಕರು ಇದ್ದರು.