ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
ಬೀದರ :ಜೂ.6: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎನ್.ಸಿ.ಸಿ. ಕಡೇಟ್ಸ್‍ಗಳಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಹಾವಿದ್ಯಾಲಯದ ಪ್ರಾಂಶುಪಾಲರಧ ಡಾ. ಪಿ. ವಿಠ್ಠಲ ರಡ್ಡಿಯವರು ವಿದ್ಯಾರ್ಥಿಗಳನ್ನು ಕುರಿತು ‘ಉಸಿರಾಗಿ ಪರಿಸರ ರಕ್ಷಿಸೋಣ” ಪ್ರತಿಯೊಬ್ಬರು ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಮಾಡುವುದಲ್ಲದೆ ತಮ್ಮ ಓಣೆ ಹಾಗೂ ಊರುಗಳಲ್ಲಿ ಮರಗಳ ಮಹತ್ವ ತಿಳಿಹೇಳಿ ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೆರೇಪಿಸಬೇಕು ಎಂದು ವಿದ್ಯಾರ್ಥಿಗಳನ್ನು ಮನಮುಟ್ಟುವಂತೆ ತಿಳಿ ಹೇಳಿದರು. ಇಂದಿನ ಪರಿಸ್ಥಿತಿಗೆ ನಮ್ಮ ಸ್ವಾರ್ಥಕ್ಕಾಗಿ ಗಿಡಮರÀಗಳನ್ನು ಕಡಿದು ಪರಿಸರ ಕ್ಷೀಣಿಸಿದೆ ಆದರಿಂದ ಇಂದು 40 ರಿಂದ 50 ಡಿಗ್ರಿ ತಾಪಮಾನ ಹೆಚ್ಚಾಗಿದೆ ಹಾಗೂ ಹೆಚ್ಚಾಗುತ್ತಲೇ ಇದೆ ಇದನ್ನು ಮನಗಂಡು ನಾವು ಪರಿಸರ ಕಾಪಾಡದೆ ಹೋದರೆ ನಮಗೆ ಉಳಿಗಾಲವಿಲ್ಲ ಎಂದು ತಿಳಿಸುತ್ತ ಎಲ್ಲರು ಪರಿಸರ ಉಳಿಸುವಲ್ಲಿ ಕೈ ಜೋಡಿಸಬೇಕೆಂದು ಮಾರ್ಮಿಕವಾಗಿ ತಿಳಿಹೇಳಿದರು. ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ ಎನ್.ಸಿ.ಸಿ. ಕೆಡೆಟ್ಸ್‍ಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇರುವದೊಂದೇ ಭೂಮಿ ಇದೆ ಎಲ್ಲರೂ ಬದುಕಲಿಕ್ಕೆ ಆದ್ದರಿಂದ ಸಂಪ್ನನ್ಮೂಲಗಳು ಮಿತವಾಗಿ ಬಳಸಬೇಕು ಭೂಮಿಯ ಆರೋಗ್ಯ ಕೆಡದ ಹಾಗೆ ಎಲ್ಲರೂ ಬಾಳಬೇಕು, ಈ ಭೂಮಿಯ ಮೇಲೆ ನಾವು ಬದುಕಬೇಕು ಹಾಗೂ ಮುಂದಿನ ಜೀವ ಸಂಕೂಲವು ಆರೋಗ್ಯದಿಂದ ಬದುಕುವ ಹಾಗೆ ಭೂಮಿಯನ್ನು ಉಳಿಸಿ, ಗಿಡ – ಮರಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಸಂರಕ್ಷಿಸಲೇಬೆಕೆಂದು ಕರೆ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ ಬಿರಾದಾರ ಕಾರ್ಯಕ್ರಮವನ್ನು ನಿರ್ವಹಿಸಿದರು, ಎನ್.ಸಿ.ಸಿ. ವಿದ್ಯಾರ್ಥಿನಿ ಕು. ಕುಂಕುಮ ವಂದಿಸಿದರು, ಕೆಡೆಟ್ ಉದೇಶ ಎಲ್ಲರನ್ನು ಸ್ವಾಗತಿಸಿದರು.