ಡಾ. ಮೊಹ್ಮದ್ ಇಮ್ರಾನ ಸಯೀದ್ ರವರಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಪ್ರಧಾನ
ಬೀದರ:ಜೂ.6: ಕರ್ನಾಟಕ ರಾಜ್ಯದ ಕಿರಿಟ ಎಂದೆ ಹೆಸರಾದ ಬೀದರ ಗಡಿ ಜಿಲ್ಲೆಯ ಶಿಕ್ಷಣ ತಜ್ಞ, ಶಿಕ್ಷಣ ಪ್ರೇಮಿ, ನೂರ್ ಕಾಲೇಜಿನ ಪ್ರಾಂಶುಪಾಲರಾದ “ಡಾ. ಮೊಹ್ಮದ್ ಇಮ್ರಾನ ಸಯೀದ್” ರವರಿಗೆ ಬೆಂಗಳೂರಿನ ಮಿಲ್ಲರ್ಸ್ ರೋಡ್‍ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ 2024ನೇ ಸಾಲಿನ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯನ್ನು ನಿವೃತ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಹಾಗೂ ಕರ್ನಾಟಕ ಲೋಕಾಯುಕ್ತ ಸಂತೋಷ ಹೆಗಡೆ ನೀಡಿದರು. ಡಾ. ಮೊಹ್ಮದ್ ಇಮ್ರಾನ ಸಯೀದ್ ರವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಅವಿರತ ಸೇವೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಮಹೋನ್ನತ ಕೊಡುಗೆಗೆ ಈ ಪುರಸ್ಕಾರ ಲಭಿಸಿದೆ.
ಝೀ ಕನ್ನಡ ನ್ಯೂಜ್ ರವರ ಸಹಯೋಗದಲ್ಲಿ ನಡೆದ ಸಮಾರಂಭವು ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಶಿಕ್ಷಕ (ಗುರು) ರÀನ್ನು ಗುರುತಿಸಿ ಅವರ ಸೇವೆಯನ್ನು ಪರಿಗಣಿಸಿ 2024ನೇ ಸಾಲಿನ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ.
ಸದರಿ ಸಮಾರಂಭದಲ್ಲಿ ಶ್ರೀ ಶ್ರೀ ಡಾ|| ಮಲ್ಲಯ್ಯಾ ಶಾಂತಮುನಿ ಸ್ವಾಮಿಗಳು, ಚಲನ ಚಿತ್ರ ನಟಿ ರಾಗೀಣಿ, ಬಿಗ್ ಬಾಸ್ ನ 9ನೇ ಸ್ಪರ್ಧಿ ರೂಪೇಶ ರಾಜಣ್ಣಾ, ಸಂಗೀತಗಾರ ಪೂಜಾ ಪ್ರಕಾಶ ಹಾಗೂ ಶರಣ ಅಯ್ಯಪ್ಪಾ, ಮುಖ್ಯಸ್ಥರಾದ ಪೂಜಾಶ್ರೀ ಹಾಗೂ ಮೊಹ್ಮದ್ ಜಾಕೀರಹುಸೇನ್ ಉಪಸ್ಥಿತರಿದ್ದರು.