ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ
ಕಲಬುರಗಿ.ಜೂ.6:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ನಾಗಶ್ರೀ ಚಾಲನೆ ನೀಡಿದರು.
ಬುಧುವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಕಲಬುರಗಿ ಜಿಲ್ಲಾ ನ್ಯಾಯಾಂಗ ಘಟಕ,ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಅರಣ್ಯ ಇಲಾಖೆ,ಕಲಬುರಗಿ ಇವರಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರÀಣೆ ಆಚರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ, ಜಿಲ್ಲಾ ನ್ಯಾಯಾವಾದಿಗಳ ಸಂಘ ಅಧ್ಯಕ್ಷರು ಗುಪ್ತಲಿಂಗ ಪಾಟೀಲ್, ಉಪಾಧ್ಯಕ್ಷರಾದ ಧರ್ಮಣ್ಣಾ ಜೈನಾಪುರ,ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರುಗಳಾದ ಎ.ವಿ. ಶ್ರೀನಾಥ, ಮಹಮ್ಮದ ಮುಜರಾ ಉಲ್ಲಾ, ಚಂದ್ರಶೇಖರ ಕರೋಶಿ, ಎಸ್.ಎಮ್. ಜಲವಾದಿ, ಯಮನಮ್ಮ, ಒಮ್ಮನಗಿ, ಎಸ್.ಎಲ್. ಚವ್ಹಾವನ, ಶ್ರೀಮತಿ ಜ್ಯೋತಿ ಶ್ರೀ ಪಾಟೀಲ್, ಪ್ರಭಾಕರ ರಾವ, ಶ್ರೀನಿವಾಸ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರುಗಳಾದ ಮಹಮ್ಮದ ಮೊಗಲಾನಿ, ಆನಂದ ಕೆ. ಎಮ್. ಅಬ್ಬುಲ್ ರೆಹಮಾನ ಪಠಾಣ, ಸುಶಾಂತ, ಚೌಗಲೆ, ಸಿವಿಲ್ ನ್ಯಾಯಾಧೀಶರುಗಳಾದ ಕೇಶವ, ದೇಶಮುಖ ಶಿವಕುಮಾರ, ಸ್ಮಿತಾ ನಾಗಲಾಪುರ, ದಸ್ತಗೀರ ಸಾಬ ಮುಲ್ಲಾ, ಸ್ನೇಹಾ ಪಾಟೀಲ, ಬಾಳು ಜಾಧವ, ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.