ಪರಿಸರವನ್ನು ನಾವೇಲ್ಲರು ಕಾಪಾಡಿಕೊಳ್ಳಬೇಕಿದೆ
ನವಲಗುಂದ,ಜೂ6: ಇತ್ತಿಚೀನ ದಿನಗಳಲ್ಲಿ ಮರ ಗಿಡಗಳು ನಾಶ ಹೊಂದುವ ಪರಿಸ್ಥಿತಿ ಎದುರಾಗಿದೆ. ಸರಿಯಾದ ರೀತಿಯ ಗಾಳಿ ಇಲ್ಲದೆ ಆರೋಗ್ಯದ ಮೇಲೆ ಪ್ರಭಾವ ಬೀರ ತೊಡಗಿದೆ ಎಂದು ಮಾಡಲ್ ಹೈಸ್ಕೂಲ್ ಮುಖ್ಯಾಧ್ಯಾಪಕ ಜಿ ಎಂ ಮಾಕಣ್ಣವರ ಹೇಳಿದರು.
ಅವರು ಶಾಲಾ ಆವರಣದಲ್ಲಿ ಸಸಿ ನಡುವ ಮೂಲಕ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ನಮ್ಮ ಪರಿಸರವನ್ನು ನಾವೇಲ್ಲರು ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ನಾವೂ ತಂದೆ-ತಾಯಿ ಮಕ್ಕಳಲ್ಲಿ ಗಿಡಗಳನ್ನು ನೆಡುವ ಬಗ್ಗೆ ಅರಿವು ಮೂಡಿಸಬೇಕು ಎಂದರು.
ವಲಯ ಅರಣ್ಯಾಧಿಕಾರಿ ಕಿರಣಕುಮಾರ ಕರತಂಗಿ ಸಾರ್ವಜನಿಕರು ತಮ್ಮ ವಿವಿಧ ಚಟುವಟಿಕೆಗಳಿಂದ ಅದನ್ನು ಹಾನಿಗೊಳಿಸುತ್ತಾರೆ. ಪರಿಸರವನ್ನು ಹಾಳು ಮಾಡುವುದನ್ನು ಮುಂದುವರೆಸಿದರೆ, ದೀರ್ಘಾವಧಿಯಲ್ಲಿ, ದುಷ್ಪರಿಣಾಮಗಳು ಮನುಷ್ಯರ ಮೇಲೂ ಪರಿಣಾಮ ಬೀರುತ್ತವೆ. ಹಾಗಾಗಿ ಪರಿಸರ ಸಂರಕ್ಷಣೆಗೆ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಎಂ ಇ ಬಿ ಪ್ರೌಢ ಶಾಲೆ ಮುಖ್ಯಾಧ್ಯಾಪಕಿ ಎಸ್ ವಾಯ್ ಉಳ್ಳಿಕಾಶಿ, ಆರ್. ಎಸ್. ಪಾಟೀಲ್, ಯು. ಎ. ಗದಗ, ಎಸ್. ಎಂ. ದೊಡಮನಿ, ಎಂ. ಎಸ್. ರಾಯನಗೌಡ್ರ, ಆರ್. ಎಸ್. ಆಲೂರ, ಬಿ. ಡಿ. ಸರಾವರಿ, ಎಸ್. ಬಿ. ಕಲಾವಂತ, ಎಂ. ಬಿ. ಸುಳ್ಳದ, ಜಿ. ಎಂ. ಮುಕ್ರಿ, ಎಸ್. ಎನ್. ಲಮಾಣಿ, ಯು. ಎಸ್. ಪೂಜಾರ, ಎಸ್. ಎನ್. ಬೀರನೂರ, ಬಿ. ವಿ. ಜಾಧವ, ಎಂ. ಎಸ್. ಹಿರೇಮಠ, ಎಂ. ಎಸ್. ಗಾರವಾಡ, ಎ. ಆರ್. ಹೌದಕ್ಕಣ್ಣವರ, ಪಿ. ಬಿ. ಚಳಕೊಪ್ಪ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.