ವಿಶ್ವ ಪರಿಸರ ದಿನಾಚರಣೆ
ನವಲಗುಂದ,ಜೂ6 : ಮಾನವ ಪರಿಸರ ಹಾಳು ಮಾಡುವಲ್ಲಿ ಸ್ಪರ್ಧೆಗೆ ಇಳಿದಂತಿದೆ.ಇದೆ ಪ್ರವೃತ್ತಿ ಮುಂದುವರೆದರೆ ಪರಿಸರ ಹಾಳಾಗಿ ಮನುಕುಲದ ಸಂತತಿ ಅವನತಿಯತ್ತ ಸಾಗುವದರಲ್ಲಿ ಸಂಶಯವೇ ಇಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಪಕರಾದ ಡಾ ಶೀಲಾಧರ ಮುಗಳಿ ಅಭಿಪ್ರಾಯಪಟ್ಟರು
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಇನ್ನೊರ್ವ ಅಥಿತಿಗಳಾದ ಕರ್ನಾಟಕ ವಿಶ್ವ ವಿದ್ಯಾಲಯದ ಜೈವಿಕ ತಂತ್ರಜ್ಞಾನದ ಪ್ರಾಧ್ಯಪಕರಾದ ಡಾ ಮೃತುಂಜಯ ಹಿರೇಮಠ ರವರು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತರಾಗಲು ಸಲಹೆ ನೀಡಿದರು.
ಮತ್ತೊರ್ವ ಅತಿಥಿಗಳಾದ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಪಕರಾದ ಡಾ ಎಚ್. ಎಚ್. ಭರಡಿ ಸಸಿಗಳನ್ನು ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ. ಬಿ. ಬಾಗಡಿ ಪರಿಸರ ಸಂರಕ್ಷಣೆಯ ಬಗ್ಗೆ ವಿವರವಾದ ಪಠ್ಯಕ್ರಮದ ಮುಖಾಂತರ ಎಲ್ಲ ವಿದ್ಯಾರ್ಥಿಗಳು ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದರು.
ಡಾ ಸಂತೋಷ ಹುಬ್ಬಳ್ಳಿ ಸ್ವಾಗತಿಸಿದರು, ಬಸವರಾಜ ಸೂಡಿ ವಂದಿಸಿದರು ಹಾಗೂ ಪ್ರಸನ್ನ ಪಂಡರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ ನಾಗರತ್ನ ಕುರಡೇಕರ್, ಸವಿತಾ ಚಿಕ್ಕಣ್ಣವರ, ವಿನಾಯಕ ಮಿರಜಕರ, ಶ್ರೀಧರ ಲೋನಕರ,ಡಾ ವೈ ಎನ್ ಗುಳುಗಂಧಿ,ಡಾ ಪ್ರವೀಣ ದೊಡಮನಿ, ವೀರಭದ್ರಪ್ಪ ಮರಡಿ,ಮುಂತಾದ ಸಿಬ್ಬಂದಿ ಹಾಜರಿದ್ದರು.